ಮಿಸ್ಸಿ ಮಿಸ್ಟರ್ ಟೀನ್ ಮಿಸ್ ಕರ್ನಾಟಕ ಸೀಸನ್ 2

0

ಕನಕಮಜಲಿನ ಕಹಾನಿ ಯೋಗೀಶ್ ಬುಡ್ಲೆಗುತ್ತು ಅವರಿಗೆ ಫಸ್ಟ್ ವಿನ್ನರ್ ಪ್ರಶಸ್ತಿ

ಮಿಸ್ಸಿ ಮಿಸ್ಟರ್ ಟೀನ್ ಮಿಸ್ ಕರ್ನಾಟಕ ಸೀಸನ್ 2 ಸ್ಪರ್ಧೆಯಲ್ಲಿ ಮೂಲತಃ ಕನಕಮಜಲು ಗ್ರಾಮದ ಬುಡ್ಲೆಗುತ್ತುವಿನವರಾಗಿದ್ದು, ಪ್ರಸ್ತುತ ಮಂಗಳೂರಿನಲ್ಲಿ ನೆಲೆಸಿರುವ ಕಹಾನಿ ಯೋಗೀಶ್ ಅವರು ಫಸ್ಟ್ ವಿನ್ನರ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಸೆ.29ರಂದು ಮಂಗಳೂರಿನ ಪಾಂಡೇಶ್ವರದಲ್ಲಿರುವ ಫಿಜಾ ನೆಕ್ಸೂಸ್ ಮಾಲ್ ನಲ್ಲಿ ಜರುಗಿದ ಸೀಸನ್ 2 ಕಾರ್ಯಕ್ರಮದಲ್ಲಿ ಒಟ್ಟು14 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದರು.
ಈಕೆ ಕನಕಮಜಲು ಗ್ರಾಮದ ಬುಡ್ಲೆಗುತ್ತು, ಪ್ರಸ್ತುತ ಶಿಕ್ಷಕಿಯಾಗಿರುವ ಶ್ರೀಮತಿ ಸ್ವಪ್ನ ಹಾಗೂ ಪೊಲೀಸ್ ಅಧಿಕಾರಿಯಾಗಿರುವ ಯೋಗೀಶ್ ದಂಪತಿಯ ಪುತ್ರಿಯಾಗಿದ್ದು, ಮಂಗಳೂರಿನ ಕಾರ್ಮೆಲ್ ಸ.ಹಿ.ಪ್ರಾ.ಶಾಲೆಯ ಐದನೇ ತರಗತಿ ವಿದ್ಯಾರ್ಥಿನಿ.