ಕೇರ್ಪಡ ಶ್ರೀ ಮಹಿಷ ಮರ್ಧಿನೀ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಆರಂಭ

0

ಎಡಮಂಗಲ ಗ್ರಾಮದ ಕೇರ್ಪಡ ಶ್ರೀ ಮಹಿಷಮರ್ಧಿನೀ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಅ. 2ರಂದು ಆರಂಭಗೊಂಡಿದೆ.

ಕ್ಷೇತ್ರದ ಪ್ರಧಾನ ಅರ್ಚಕ ಶ್ರೀಹರಿ ಕುಂಜೂರಾಯರು ಮತ್ತು ಪ್ರಶಾಂತ್ ಪರ್ಲತ್ತಾಯರ ಬಳಗದವರ ನೇತೃತ್ವದಲ್ಲಿ ಬೆಳಿಗ್ಗೆಯಿಂದಲೇ ವಿವಿಧ ಪೂಜಾಕಾರ್ಯಕ್ರಮ, ವಿವಿಧ ಪೂಜಾ ಸೇವೆಗಳು ಮಧ್ಯಾಹ್ನ ಅನ್ನಸಂತರ್ಪಣೆ ರಾತ್ರಿ ಅನ್ನಸಂತರ್ಪಣೆ ಸಂಜೆ ಭಜನೆ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಸಂಜೆ ಸಾಮೂಹಿಕ ಪ್ರಾರ್ಥನೆ ಮಾಮೂಲು ರಂಗಪೂಜೆ ಸೇವಾರಂಗಪೂಜೆ ವಿವಿಧ ಸೇವಾ ಪೂಜೆ ನಡೆಯಿತು.

ಚಾರ್ವಾಕ ಕಪಿಲೇಶ್ವರ ಕಲಾ ಸಮಿತಿ ಸಿಂಗಾರಿ ಮೇಳದವರಿಂದ ಪ್ರತಿ ವರ್ಷದಂತೆ ಸೇವೆಯ ಚೆಂಡೆ ವಾದನ ರಾತ್ರಿ ನಡೆಯಿತು.