ಭೂ ಸೇನೆಯಲ್ಲಿ ಹವಾಲ್ದಾರ್ ಆಗಿದ್ದ ತಿರುಮಲೇಶ್ವರ ಕಡ್ತಲ್‌ಕಜೆ (ಅಬೀರ)ರವರು ಸೆ.30ರಂದು ಸೇವೆಯಿಂದ ನಿವೃತ್ತಿಗೊಂಡಿದ್ದಾರೆ.
2000 ನೇ ಇಸವಿಯಲ್ಲಿ ಸೇನೆಗೆ ಸೇರಿರುವ ಇವರು ಒಟ್ಟು 24 ವರ್ಷಗಳ ಕಾಲ ದೇಶಸೇವೆ ಸಲ್ಲಿಸಿದ್ದಾರೆ.
ಗುತ್ತಿಗಾರು ಗ್ರಾಮದ ದಿ||ಪುಟ್ಟಣ್ಣ ಗೌಡ ಮತ್ತು
ಶ್ರೀ ಮತಿ ಕಮಲ ಕಡ್ತಲ್ಕಜೆ(ಅಬೀರ) ದಂಪತಿಗಳ ಪುತ್ರ ನಾಗಿರುವ ಇವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ವಳಲಂಬೆಯಲ್ಲಿ, ಪ್ರೌಢಶಾಲಾ ಮತ್ತು ಪ್ರಥಮ ಪಿ.ಯು ಶಿಕ್ಷಣವನ್ನು ಗುತ್ತಿಗಾರು ಪದವಿ ಪೂರ್ವ ಕಾಲೇಜಿನಲ್ಲಿ ಪೂರೈಸಿದರು. ದ್ವಿತೀಯ ಪಿ.ಯು ಓದುತಿದ್ದಾಗಲೇ ಸೇನೆಗೆ ನೇಮಕವಾದರು.
ಮಹಾರಾಷ್ಟ್ರ ಅಹಮದಾಬಾದ್ ನಗರ
2000ದಿಂದ 2001 ರ ಸೆಪ್ಟೆಂಬರ್ ವರೆಗೆ ತರಬೇತಿ ಮುಗಿಸಿದರು. ಬಳಿಕ ವರ್ಗಾವಣೆ ಗೊಂಡು 2004 ರಾಜಸ್ಥಾನ್ ದ ಬಿಕನೇರ್ ನಲ್ಲಿ,
2004 ರಿಂದ 2006 ರಾಜಸ್ತಾನ ದ ಬಾರ್ಮೆರ್ ನಲ್ಲಿ,
2006 ರಿಂದ 2008 MIRC ಟ್ರೈನಿಂಗ್ ಸೆಂಟರ್ ನಲ್ಲಿ ನೂತನವಾಗಿ ಕರ್ತವ್ಯಕ್ಕೆ ಸೇರಿದವರಿಗೆ ತರಬೇತು ದರರಾಗಿದ್ದರು.
2008 ರಿಂದ 2010 ಮಧ್ಯಪ್ರದೇಶ ದ ಭೋಪಾಲ್,
2011 ರಿಂದ 2013 ಡೆಹ್ರಾಡೂನ್ ನಲ್ಲಿ,
2013 ರಿಂದ 2014 ರಾಜಸ್ಥಾನದ ಬಿಕನೇರ್
2014 ರಿಂದ 2016
ರಾಷ್ಟೀಯ ರೈಫಲ್ ಜಮ್ಮು ಕಾಶ್ಮೀರದಲ್ಲಿ ಕರ್ತವ್ಯಕ್ಕೆ ನೆರವೇರಿಸಿದರು.
2017 ರಲ್ಲಿ 6 ತಿಂಗಳು
ದಕ್ಷಿಣ ಆಫ್ರಿಕಾ ದ ಕಾಂಗೋ ದಲ್ಲಿ ಭಾರತೀಯ ಸೇನೆಯೊಂದಿಗೆ ಕರ್ತವ್ಯಕ್ಕೆ,
2018 ರಿಂದ 2019 ರಾಜಸ್ಥಾನ ದ ಬಾರ್ಮೆರ್,
2020 ರಿಂದ 2023 ರಾಜಸ್ಥಾನ್ ಜೈ ಸಾಲ್ಮರ್ ನಲ್ಲಿ ಕರ್ತವ್ಯ ಮಾಡಿ
2024 ರಲ್ಲಿ ಚೀನಾ ಗಡಿಭಾಗದ ಲೇಹ್ ಲಡಾಖ್ ನಲ್ಲಿ ಕರ್ತವ್ಯ ನಿರ್ವಹಿಸಿ ಸೆ.30 ರಂದು ನಿವೃತ್ತಿಯಾದರು. ತಿರುಮಲೇಶ್ವರ ಅವರ ಪತ್ನಿ
ಯಶೋದಾ ಪಿ, ಸಮುದಾಯ ಅರೋಗ್ಯ ಕೇಂದ್ರ ವಾಮದಪದವ್ ಇಲ್ಲಿ
ಪ್ರಯೋಗಶಾಲ ತಾಂತ್ರಿಕ ಅಧಿಕಾರಿಯಾಗಿಯಾಗಿರುತ್ತಾರೆ
ಪುತ್ರ ಗುರುಕಿರಣ ಕೆ.ಟಿ ಆರನೇ ತರಗತಿಯ ವಿದ್ಯಾರ್ಥಿ.