ಕೇನ್ಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಅ. 3 ರಿಂದ ಅ. 12ರ ತನಕ ವಿವಿಧ ವೈದಿಕ ಕಾರ್ಯಕ್ರಮದೊಂದಿಗೆ ಜರಗಲಿದೆ. ನವರಾತ್ರಿಯ ಪ್ರತೀ ದಿನ ಸಂಜೆ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಮತ್ತು ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ಅ. 3ರಂದು ಬೆಳಿಗ್ಗೆ ಗಣಪತಿ ಹೋಮ, ಸಾಮೂಹಿಕ ದೇವತಾ ಪ್ರಾರ್ಥನೆ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಅ. 4ರಂದು ರಾತ್ರಿ 8.30ರಿಂದ ಸಾಮೂಹಿಕ ದುರ್ಗಾಪೂಜೆ, 6ರಂದು ಬೆಳಿಗ್ಗೆ ತೆನೆ ತುಂಬಿಸುವುದು, ಶ್ರೀ ಗಣಪತಿ ದೇವರಿಗೆ ಅಪ್ಪಕಜ್ಜಾಯ ಸೇವೆ, ಅ. 7ರಂದು ನಾಗದೇವರಿಗೆ ಪಂಚಾಮೃತ ಅಭಿಷೇಕ, ನಾಗತಂಬಿಲ ಅ. 8ರಂದು ರಾತ್ರಿ ಸಾಮೂಹಿಕ ದುರ್ಗಾಪೂಜೆ ನಡೆಯಲಿದೆ. ಅ. 9ರಂದು ಶ್ರೀ ಮಹಾವಿಷ್ಣು ದೇವರಿಗೆ ಹಾಲು ಪಾಯಸ ಸೇವೆ ನಡೆಯಲಿದೆ. ಅ. 11ರಂದು ಬೆಳಿಗ್ಗೆ ಆಯುಧ ಪೂಜೆ, ರಾತ್ರಿ 8.30ರಿಂದ ರಂಗಪೂಜೆ, ಅ. 12ರಂದು ಆಂಜನೇಯ ಸ್ವಾಮಿಗೆ ಅಲಂಕಾರ ಪೂಜೆ, ಅಕ್ಷರಾಭ್ಯಾಸ, ನವಾನ್ನ ಭೋಜನ, ರಾತ್ರಿ ಮಹಾಪೂಜೆಯೊಂದಿಗೆ ನವರಾತ್ರಿ ಮುಕ್ತಾಯಗೊಳ್ಳಲಿದೆ.