ಸಿ.ಎಫ್.ಸಿ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ನರ್ಲಡ್ಕ ಕ್ರೀಡಾಂಗಣದಲ್ಲಿ ಕರಿಂಬಿಲ ಪ್ರಿಮಿಯರ್ ಲೀಗ್ ಹಾಗೂ ಅಂಗನವಾಡಿ ಕಾರ್ಯಕರ್ತೆಗೆ ಸನ್ಮಾನ ಕಾರ್ಯಕ್ರಮ ಜ. 19ರಂದು ನಡೆಯಿತು.
ಕಾರ್ಯಕ್ರಮವನ್ನು ಎಡಮಂಗಲ ಗ್ರಾ.ಪಂ. ಅಧ್ಯಕ್ಷ ರಾಮಣ್ಣ ಜಾಲ್ತಾರು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಸಿ.ಎಫ್.ಸಿ. ಕರಿಂಬಿಲ ಇದರ ಅಧ್ಯಕ್ಷ ಉಬೈಸ್ ಎಂ ವಹಿಸಿದರು. ಮುಖ್ಯ ಅತಿಥಿಗಳಾಗಿ ರಘುನಾಥ ರೈ ಕಟ್ಟಬೀಡು, ಪ್ರಸನ್ನ ಭಟ್, ಇಬ್ರಾಹಿಂ ಕಜೆ, ಪ್ರಕಾಶ್ ರೈ ಅತಿಥಿಗಳಾಗಿ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಎಡಮಂಗಲ ಗ್ರಾ.ಪಂ. ಸದಸ್ಯ ಮಾಯಿಲಾಪ್ಪ ಗೌಡ, ಹರೀಶ್ ರೈ ನರ್ಲಡ್ಕ , ಶರೀಫ್ ಗುತ್ತಿಗೆ, ಬಾಲಕೃಷ್ಣ ರೈ, ಅಬ್ಬಾಸ್ ಉಳ್ಳಾಲಾಡಿ , ಸುಲೈಮಾನ್ ಪ್ರಗತಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ 32 ವರ್ಷಗಳ ಕಾಲ ನರ್ಲಡ್ಕ ಅಂಗನವಾಡಿ ಕೆಂದ್ರದಲ್ಲಿ ಸೇವೆ ಸಲ್ಲಿಸಿರುವ ಶಿಕ್ಷಕಿ ಶ್ರೀಮತಿ ಯಶೋದ ಎಡಮಂಗಲರನ್ನು ಸನ್ಮಾನಿಸಲಾಯಿತು. ಕೆ.ಪಿ.ಎಲ್ 2025 ಚಾಂಪಿಯನ್ ತಂಡವಾಗಿ ವೈ.ಎಫ್.ಸಿ ಕರಿಂಬಿಲ ಹಾಗೂ ರನ್ನರ್ಸ್ ಆಗಿ ಸಹಾರ ಎಣ್ಮೂರು ಬಹುಮಾನ ಪಡೆದುಕೊಂಡರು.