ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ನವರಾತ್ರಿ ಉತ್ಸವಗಳು ಇಂದು ಆರಂಭಗೊಂಡು ಅ. 12ರ ತನಕ ಶ್ರೀ ಕ್ಷೇತ್ರದ ತಂತ್ರಿಗಳಾದ ಪಾವಂಜೆ ವಾಗೀಶ ಶಾಸ್ತ್ರೀಯವರ ನೇತೃತ್ವದಲ್ಲಿ ನಡೆಯಲಿದೆ. ಶ್ರೀ ತ್ರಿಶೂಲಿನೀ ಅಮ್ಮನವರ ಸನ್ನಿಧಿಯಲ್ಲಿ ಅ. 6ರಂದು ಬೆಳಿಗ್ಗೆ ಕದಿರು ತುಂಬಿಸುವುದು, ನವಾನ್ನ,
ಅ. 7ರಂದು ಚಂಡಿಕಾಹೋಮ, ಅ. 9ರಂದು ಸಂಜೆ 7.00ಕ್ಕೆ ಶಾರದಾ ಪೂಜಾರಂಭ, ಅ. 11ರಂದು ಮಹಾನವಮಿ, ಬೆಳಿಗ್ಗೆ ಗಂಟೆ 11.00ರಿಂದ ಆಯುಧ ಪೂಜೆ ನಡೆಯಲಿದೆ. ಅ. 12ರ ವಿಜಯದಶಮಿಯಂದು ಬೆಳಿಗ್ಗೆ ಗಂಟೆ 10ರಿಂದ ಮಹಾಗಣಪತಿಗೆ ಅಪ್ಪದ ಪೂಜೆ, ಶ್ರೀ ನಾಗದೇವರು, ದೈವಗಳಿಗೆ ತಂಬಿಲ ಮತ್ತು ವಿಷ್ಣುಮಂಗಲ ಶ್ರೀ ಶೀರಾಡಿ ರಾಜನ್ ದೇವಸ್ಥಾನದಲ್ಲಿ ತಂಬಿಲ ಸೇವೆ ನಡೆಯಲಿದೆ.
ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ಅ. 12ರಂದು ವಿಜಯದಶಮಿ ಪ್ರಯುಕ್ತ ಮಧ್ಯಾಹ್ನ 11.00ರಿಂದ ಅಕ್ಷರಾಭ್ಯಾಸ, ರಾತ್ರಿ ಸಾಮೂಹಿಕ ರಂಗಪೂಜೆ, ರಕ್ತೇಶ್ವರಿ, ಗುಳಿಗ ದೈವಗಳಿಗೆ ತಂಬಿಲ ಸೇವೆ ನಡೆಯಲಿದೆ.