ಬಳ್ಪ ಗ್ರಾಮದ ಕುಂಜತ್ತಾಡಿ ಶ್ರೀ ವನದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವಗಳು ಅ. 3ರಿಂದ ಅ. 11ರ ತನಕ ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಇಂದು ಬೆಳಿಗ್ಗೆ ಗಣಪತಿ ಹವನ, ಲೋಕಕಲ್ಯಾಣಾರ್ಥವಾಗಿ ಮಹಾ ಚಂಡಿಕಾ ಯಾಗ ನಡೆಯಲಿದೆ. ಅ. 6ರಂದು ಸಂಜೆ ಆಶ್ಲೇಷ ಬಲಿ ಪೂಜೆ, ದುರ್ಗಾಪೂಜೆ, ಅ. 11ರಂದು ಮಹಾನವಮಿ ಮಹೋತ್ಸವ, ಹೊಸ್ತಾರೋಗಣೆ, ಅಕ್ಷರಾಭ್ಯಾಸ, ಸಂಜೆ ಸಾಮೂಹಿಕ ದುರ್ಗಾಪೂಜೆ, ಆಯುಧ ಪೂಜೆ ನಡೆಯಲಿದೆ. ನವರಾತ್ರಿಯ ಪ್ರತೀ ದಿನ ಮಧ್ಯಾಹ್ನ ಮತ್ತು ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.