ಸುಳ್ಯದ ಗಣೇಶ್ ಕಾಂಪ್ಲೆಕ್ಸ್ ಬಳಿ ದುರ್ಗಾ ವೆಜಿಟೇಬಲ್ಸ್ ಮತ್ತು ದುರ್ಗಾ ಸರ್ವಿಸ್ ಸ್ಟೇಷನ್ ಶುಭಾರಂಭ

0

ಸುಳ್ಯದ ಖಾಸಗಿ ಬಸ್ ನಿಲ್ದಾಣದ ಎದುರಿನ ಗಣೇಶ್ ಕಾಂಪ್ಲೆಕ್ಸ್ ಹಿಂಬದಿಯ ಜಾಗದಲ್ಲಿ
ಶ್ರೀ ದುರ್ಗಾ ವೆಜಿಟೇಬಲ್ಸ್ ಮತ್ತು ಶ್ರೀ ದುರ್ಗಾ ಸರ್ವಿಸ್ ಸ್ಟೇಷನ್ ಇದರ ಶುಭಾರಂಭವು ಅ.3 ರಂದು ನಡೆಯಿತು.

ಸುಳ್ಯದ ಪಶು ಸಂಗೋಪನಾ ಇಲಾಖೆಯ ವೈದ್ಯಾಧಿಕಾರಿ ಡಾ.ನಿತಿನ್ ಪ್ರಭು ಸರ್ವಿಸ್ ಸ್ಟೇಷನ್ ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು. ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಯವರು ದುರ್ಗಾ ವೆಜಿಟೇಬಲ್ಸ್ ವ್ಯಾಪಾರ ಮಳಿಗೆಯನ್ನು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಅತಿಥಿಗಳಾಗಿ ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಪೆರಾಜೆ ಶಾಸ್ತಾವು ದೇವಸ್ಥಾನದ ಆಡಳಿತ ಮೊಕ್ತೇಸರರಾದ ಎನ್.ಎ.ಜಿತೇಂದ್ರ ನಿಡ್ಯಮಲೆ,ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಕೃಪಾಶಂಕರ ತುದಿಯಡ್ಕ,ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನದ ಮ್ಯಾನೇಜರ್ ಆನಂದ ಕಲ್ಲುಗದ್ದೆ ಉಪಸ್ಥಿತರಿದ್ದರು. ವ್ಯಾಪಾರ
ಮಳಿಗೆಯ ಪಾಲುದಾರರಾದ ಭವಾನಿಶಂಕರ ಪೆರಾಜೆ, ಅನಿಲ್ ಕುಮಾರ್ ಕೇರ್ಪಳ, ಸಂತೋಷ್ ತೊಡಿಕಾನ, ಚೇತನ್ ಸುಳ್ಯ, ವಿಜಯಾನಂದ ಗೂನಡ್ಕ, ಗಣೇಶ್ ಬೆಟ್ಟಂಪಾಡಿ ಸ್ವಾಗತಿಸಿದರು.


ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ದುರ್ಗಾ ಸರ್ವಿಸ್‌ ಸ್ಟೇಷನ್ ನಲ್ಲಿ ಎಲ್ಲಾ ರೀತಿಯ ವಾಹನಗಳನ್ನು ಬಾವಿಯ ಶುದ್ಧ ನೀರಿನಿಂದ ಕ್ಲಪ್ತ ಸಮಯದಲ್ಲಿ ವಾಶ್ ಮಾಡಿಕೊಡಲಾಗುವುದು.
ದುರ್ಗಾ ವೆಜಿಟೇಬಲ್ಸ್ ನಲ್ಲಿ ತಾಜಾ ತರಕಾರಿ ಮತ್ತು ತಾಜಾ ಹಣ್ಣು ಹಂಪಲುಗಳನ್ನು ರಖಂ ಮತ್ತು ಚಿಲ್ಲರೆಯಾಗಿ ಕ್ಲಪ್ತ ಸಮಯದಲ್ಲಿ ಒದಗಿಸಿಕೊಡಲಾಗುವುದು ಎಂದುಪಾಲುದಾರರು ತಿಳಿಸಿದರು.