ಮಾಡಬಾಗಿಲು ಕಂಬಳ ಆನಂದ ಗೌಡ ಟ್ರಸ್ಟ್ (ರಿ)ಕಂಬಳ ಇವರ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 9ನೇ ವರ್ಷದ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ಅ.2 ರಂದು ಪಂಜ ಸರಕಾರಿ ಪದವಿ ಪೂರ್ವ ಕಾಲೇಜುನಲ್ಲಿ ನಡೆಯಿತು.
ಮಾಡಬಾಗಿಲು ಟ್ರಸ್ಟ್ ಅಧ್ಯಕ್ಷ ಬಿ.ಎಂ. ಆನಂದ ಗೌಡ ಕಂಬಳ ಸಭಾಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮವನ್ನು ಪುತ್ತೂರು,ನಿವೃತ್ತ ಅಂಚೆ ಪಾಲಕ ಸೀತಾರಾಮ ಗೌಡ ಮುಂಡಾಳ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಸುಳ್ಯ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಶೀತಲ್ ಯು.ಕೆ ,ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ ಜಳಕದಹೊಳೆ , ಸುಳ್ಯ ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಶ್ರೀಮತಿ ವೀಣಾ ಎಂ ಟಿ ,ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕ ವಾಸುದೇವ ಗೌಡ ನಡ್ಕ, ಪಂಜ ಸರಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ವೆಂಕಪ್ಪ ಗೌಡ ಕೆ , ಮುಖ್ಯ ಶಿಕ್ಷಕ ದೇವಿಪ್ರಸಾದ್ ಎ , ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಚೀನಪ್ಪ ಕಾಣಿಕೆ, ಎಸ್ ಡಿ ಎಂ ಸಿ ಅಧ್ಯಕ್ಷ ಸೋಮಶೇಖರ ಬಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸವಿತಾರ ಮುಡೂರು ಮತ್ತು ಟ್ರಸ್ಟಿಗಳಾದ ಶ್ರೀಮತಿ ಬಿ ಎಂ ಗಂಗಮ್ಮ , ಶ್ರೀಮತಿ ಸುಧಾ ಯಶವಂತ ಕುದುಂಗು, ಹೇಮಂತ್ ಕುಮಾರ್ ಕಂಬಳ, ದಾಸ್ ಪ್ರಕಾಶ್ ಕಂಬಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.
2023-24 ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಕನ್ನಡ ವಿಭಾಗದಲ್ಲಿ ಸುಳ್ಯ ತಾಲೂಕು ಮಟ್ಟದಲ್ಲಿ ವಿದ್ಯಾರ್ಥಿ ವೇತನ ಪುರಸ್ಕೃತರಿಗೆ ಹತ್ತು ಲಕ್ಷ ರೂ ವಿನ ಶಾಶ್ವತ ವಿದ್ಯಾ ನಿಧಿಯ ಬಡ್ಡಿ ಹಣ ಗಳಿಕೆಯನ್ನು ಕನ್ನಡ,ಗಣಿತ, ವಿಜ್ಞಾನ ವಿಷಯದಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಪುರಸ್ಕೃತರು: ವಿಜ್ಞಾನ ದಲ್ಲಿ 100ಕ್ಕೆ 100 ಅಂಕ ಪಡೆದ ಎಣ್ಮೂರು ಪ್ರೌಢ ಶಾಲೆಯ ದೀಪಕ್ ಡಿ ರೂ33000 ಮತ್ತು ಸನ್ಮಾನ ಸ್ವೀಕರಿಸಿದರು.
ಗಣಿತ ದಲ್ಲಿ 100ಕ್ಕೆ 99 ಆಂಕ ಪಡೆದ ಗುತ್ತಿಗಾರು ನಮಿತಾ ಮರಿಯ ಕ್ಯಾಸ್ಟಲಿನೋ ರೂ.33000 ಮತ್ತು ಸನ್ಮಾನ ಸ್ವೀಕರಿಸಿದರು.
ಕನ್ನಡದಲ್ಲಿ 125ಕ್ಕೆ 125 ಅಂಕ ಪಡೆದ ಸುಳ್ಯ ಸ. ಪ.ಪೂ.ಕಾಲೇಜಿನ ಧಯಶ್ರೀ, ಐವರ್ನಾಡು ಸ.ಪ.ಪೂ.ಕಾಲೇಜಿನ ಗಾಯನ ಪಿ, ಎಲಿಮಲೆ ಸ.ಪ್ರೌಢ ಶಾಲೆಯ ಚೇತನಾ ಎಂ. ಎ, ಮರ್ಕಂಜ ಸ.ಪ್ರೌಢ ಶಾಲೆಯ ರಚನ್ ಬಿ ಎ, ಗಾಂಧಿನಗರ ಕೆ ಪಿ ಎಸ್ ಅಸ್ಲೇಮಿಯಾ ಟಿ ಐ, ಗಾಂಧಿನಗರ ಕೆ ಪಿ ಎಸ್ ಫಾತಿಮತ್ ತಂಝೀಹ ಬೀವಿ ತಲಾ ರೂ.4700 ಮತ್ತು ಸನ್ಮಾನ ಸ್ವೀಕರಿಸಿದರು.
2023-24ನೇ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ಪಂಜ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಪ್ರಖ್ಯಾತ ಎಚ್ ಎನ್ ಮತ್ತು ಕಾಲೇಜು ವಿಭಾಗದಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿ ವಿನೀತಾ ಪಿ ರವರಿಗೆ ಟ್ರಸ್ಟ್ನ ವತಿಯಿಂದ ನಗದು ಬಹುಮಾನವನ್ನು ವಿತರಿಸಲಾಯಿತು
ಕಾರ್ಯಕ್ರಮದಲ್ಲಿ ದಾಸ್ ಪ್ರಕಾಶ್ ಕಂಬಳ ಸ್ವಾಗತಿಸಿದರು. ಪುರಂದರ ಪನ್ಯಾಡಿ ನಿರೂಪಿಸಿದರು.ದೇವಿಪ್ರಸಾದ್ ಎ ವಂದಿಸಿದರು.