78ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು ನೋವಾ ವರ್ಲ್ಡ್ ರೆಕಾರ್ಡ್ಸ್ ಅಧಿಕೃತ ಪ್ರಯತ್ನದಲ್ಲಿ ಅಧ್ಬುತ ಭಾಗವಹಿಸುವಿಕೆಯನ್ನು ಗುರುತಿಸಿ ಗೌರಿತಾಳ ಅತ್ಯುತ್ತಮ ಪ್ರತಿಭೆ ಮತ್ತು ಕೌಶಲ್ಯಗಳನ್ನು ಆಗಸ್ಟ್ 15ರಂದು “ಶೋ ಕೇಸ್ ಯುವರ್ ಟ್ಯಾಲೆಂಟ್ ” ಕಾರ್ಯ ಕ್ರಮದಲ್ಲಿ ಪ್ರದರ್ಶಿಸಲಾಯಿತು. ವಿವಿಧ ದೇಶಗಳ ಯೋಗಪಟು ಗಳು ಈ ಕಾರ್ಯ ಕ್ರಮ ದಲ್ಲಿ ಭಾಗವಹಿಸಿದ್ದರು. ಒಂದು ನಿಮಿಷದಲ್ಲಿ ಅತೀ ಗರಿಷ್ಠ ಸಂಖ್ಯೆಯ ಆಸನಗಳನ್ನು ಸ್ಟೂಲ್ ಮೇಲೆ ಮಾಡುವ ಮೂಲಕ ನೋವಾ ವರ್ಲ್ಡ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ದಾಖಲಿಸಿರುತ್ತಾಳೆ ಇದು ಈಕೆಯ 14ನೇ ದಾಖಲೆ ಯಾಗಿದ್ದು 11ನೇ ವಿಶ್ವ ದಾಖಲೆ ಯಾಗಿದೆ. ಅಮರ ಯೋಗ ತರಬೇತಿ ಕೇಂದ್ರ ಗುತ್ತಿಗಾರಿನಲ್ಲಿ ಯೋಗ ಕಲಿಯುತ್ತಿರುವ ಇವಳು ಯೋಗ ಗುರು ಶರತ್ ಮರ್ಗಿಲಡ್ಕರವರ ಶಿಷ್ಯೆ. ಕುಮಾರಸ್ವಾಮಿ ವಿದ್ಯಾಲಯದಲ್ಲಿ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಇವಳು ಡಾ. ಗೌತಮ್ ಹಾಗೂ ಡಾ. ರಾಜೇಶ್ವರಿ ಪುತ್ರಿ.