ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಠಿ ಮತ್ತು ಗೋಣಿಕೊಪ್ಪ ದಸರಾ ಬಹುಭಾಷಾ ಕವಿಗೋಷ್ಠಿಗೆ ಸಾಹಿತಿ ಭೀಮರಾವ್ ವಾಷ್ಠರ್ ಅವರ ಮರಾಠಿ ಕವನಗಳು ಆಯ್ಕೆ

0

ಸುಳ್ಯದ ಕವಿ, ಸಾಹಿತಿ, ಜ್ಯೋತಿಷಿಯಾಗಿರುವ ಎಚ್. ಭೀಮರಾವ್ ವಾಷ್ಠರ್ ಕೋಡಿಹಾಳ ಅವರು ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಠಿ ಮತ್ತು ಗೋಣಿಕೊಪ್ಪ ದಸರಾ ಬಹುಭಾಷಾ ಕವಿಗೋಷ್ಠಿಗೆ ಮರಾಠಿ ಕವನಗಳು ಆಯ್ಕೆಯಾಗಿವೆ.

ಅ. 9 ರಂದು ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಟಿಯಲ್ಲಿ “ಜಗಾತ್ಲ ತೋರ್ಲ ದೇವ್ ಕೃಷ್ಣಾ” ಹಾಗೂ ಅ. 11 ರಂದು ಗೋಣಿಕೊಪ್ಪ ದಸರಾ ಬಹುಭಾಷಾ ಕವಿಗೋಷ್ಟಿಯಲ್ಲಿ “ಮ್ಹಾಗಲ ಕಾಲ ಕವಾ ಏಯಲ” ಮರಾಠಿ ಕವನಗಳನ್ನು ವಾಚನ ಮಾಡಲಿದ್ದಾರೆ. ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಠಿಯಲ್ಲಿ ಗಾಯಕ, ಚಿತ್ರ ನಿರ್ದೇಶಕ, ಸಂಘಟಕರಾದ ಎಚ್. ಭೀಮರಾವ್ ವಾಷ್ಠರ್ ರವರು ಸತತವಾಗಿ 12 ವರ್ಷಗಳಿಂದಲೂ ಮರಾಠಿ ಭಾಷಾ ಕವನವನ್ನು ವಾಚನ ಮಾಡಿದ ಹೆಗ್ಗಳಿಕೆ ಇವರದಾಗಿದೆ.