ಸೈಂಟ್ ಜೋಸೆಫ್ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ಯೋಗ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

0

ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಶ್ರೀಮದ್ ಭುವನೇಂದ್ರ ವಿದ್ಯಾ ಸಂಸ್ಥೆಗಳು ಕಾರ್ಕಳದಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ಯೋಗ ಸ್ಪರ್ಧೆಯಲ್ಲಿ ಸುಳ್ಯದ ಸೈಂಟ್ ಜೋಸೆಫ್ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಮೋoಟಡ್ಕ ಶಶಿಧರ ಎಂ.ಜೆ ಮತ್ತು ರೇಷ್ಮಾ ಕೆ. ಎಸ್ ದಂಪತಿಗಳ ಪುತ್ರಿ ಅವನಿ ಎಂ. ಎಸ್ 6ನೇ ತರಗತಿ ಅಥ್ಲೆಟಿಕ್ಸ್ ವಿಭಾಗದಲ್ಲಿ ಪ್ರಥಮ ಸ್ಥಾನ, ಟ್ರೆಡಿಶನಲ್ ವಿಭಾಗದಲ್ಲಿ ಅಡ್ಕಾರ್ ಶರತ್ ಕುಮಾರ್ ಹಾಗೂ ಶೋಭಾ ಕುಮಾರಿ ದಂಪತಿಗಳ ಪುತ್ರಿ ಸೋನಾ ಅಡ್ಕಾರ್ 6ನೇ ತರಗತಿ ದ್ವಿತೀಯ ಸ್ಥಾನ , ಕೆರೆಕ್ಕೊಡಿ ಕೃಷ್ಣಪ್ಪ ಗೌಡ ಹಾಗೂ ಪುಷ್ಪಾವತಿ ದಂಪತಿಗಳ ಪುತ್ರಿ ಹಾರ್ಧಿಕ ಕೆರೆಕೋಡಿ 6ನೇ ತರಗತಿ ನಾಲ್ಕನೇ ಸ್ಥಾನ ಪಡೆದು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಶಾಲಾ ಸಂಚಾಲಕರಾದ ರೆ. ಫಾ. ವಿಕ್ಟರ್ ಡಿ’ಸೋಜ, ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಮೇರಿ ಸ್ಟೆಲ್ಲಾ ರ ಮಾರ್ಗದರ್ಶನದಲ್ಲಿ, ತಂಡದ ವ್ಯವಸ್ಥಾಪಕಿಯಾಗಿ ದೈಹಿಕ ಶಿಕ್ಷಣ ಶಿಕ್ಷಕಿ ಪುಷ್ಪವೇಣಿ ಹುದೇರಿ ಸಹಕರಿಸಿ, ಸಂತೋಷ್ ಮುಂಡಕಜೆ ತರಬೇತಿ ನೀಡಿರುತ್ತಾರೆ.