ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರ ಅರಂತೋಡು ಮತ್ತು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಮಂಗಳೂರು ಇದರ ಆಶ್ರಯದಲ್ಲಿ ಅಂಚೆ ಉಳಿತಾಯ ಖಾತೆ ಮತ್ತು ಅಪಘಾತ ವಿಮೆ ನೋಂದಣಿ ಶಿಬಿರವು ಅ.14ರಂದು ಅರಂತೋಡು ಗ್ರಾಮ ಒನ್ ಕಚೇರಿಯಲ್ಲಿ ನಡೆಯಲಿದೆ.
ಸಮಗ್ರ ಅಪಘಾತ ವಿಮೆಯು ವಾರ್ಷಿಕ ಪ್ರೀಮಿಯಂ 549, 557, 749 ಇರುತ್ತದೆ. ಇದರ ಪ್ರಮುಖ ವೈಶಿಷ್ಟ್ಯಗಳು ಇಂತಿವೆ ಅಪಘಾತದಲ್ಲಿ ಮೃತ್ಯು ಅಥವಾ ಶಾಶ್ವತ ಸಂಪೂರ್ಣ ಅಂಗವೈಕಲ್ಯ ಹೊಂದಿದ್ದಲ್ಲಿ ಸಂಪೂರ್ಣ ವಿಮಾ ಮೊತ್ತ ದೊರೆಯಲಿದೆ ಮತ್ತು ಕೋಮಾ ಕೇರ್, ಮಕ್ಕಳ ಶಿಕ್ಷಣ ನಿಧಿ , ಆಸ್ಪತ್ರೆ ದಾಖಲಾತಿ ವೆಚ್ಚ, ಒಂದು ಬಾರಿಗೆ ಉಚಿತ ಆರೋಗ್ಯ ತಪಾಸಣೆ, ಅಂತಿಮ ಸಂಸ್ಕಾರ ವೆಚ್ಚ ಭರಿಸಲಿದೆ ಹಾಗೂ 3200 ಪ್ರಿವೆಂಟಿವ್ ಹೆಲ್ತ್ ಚೆಕ್ ಅಪ್ ದೊರೆಯಲಿದೆ. 557 ಪಾಲಿಸಿಯಲ್ಲಿ ಅಕ್ಸಿಡೆಂಟಲ್ ಕ್ಯಾಶ್ ಲೆಶ್ ಕ್ಲೇಮ್ ದೊರೆಯತ್ತದೆ. ಸಾರ್ವಕಾಲಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.