ಶ್ರೀ ವೀರಮಾರುತಿ ಸೇವಾ ಟ್ರಸ್ಟ್ ರಿ., ಮೂಡಬಿದ್ರೆ ಇದರ ಆಶ್ರಯದಲ್ಲಿ 35ನೇ ವರ್ಷದ ಮೂಡಬಿದಿರೆ ಶ್ರೀ ಶಾರದೋತ್ಸವದ ಪ್ರಯುಕ್ತ ಯೋಗಶ್ರೀ ಯೋಗ ಬಳಗ ಮಂಗಳೂರು ಸಹಯೋಗದಲ್ಲಿ ಅ. 9ರಂದು ನಡೆದ ರಾಜ್ಯ ಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಯಲ್ಲಿ ತನ್ವಿ ತಂಟೆಪ್ಪಾಡಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಹಿರಿಯ ಪ್ರಾಥಮಿಕ ಬಾಲಕಿಯರ (5 ರಿಂದ 7ನೇ ತರಗತಿ )ವಿಭಾಗದಲ್ಲಿ ಸ್ಪರ್ಧಿಸಿದ ಇವರು ನಿರಂತರ ಯೋಗ ಕೇಂದ್ರ ನಿಂತಿಕಲ್ಲು ಇಲ್ಲಿ ಯೋಗ ಶಿಕ್ಷಕ ಶರತ್ ಮರ್ಗಿಲಡ್ಕರ ಜೊತೆ ಮಾರ್ಗದರ್ಶನ ಪಡೆಯುತ್ತಿದ್ದಾರೆ. ಸುಳ್ಯ ತಾಲೂಕಿನ ಕಳಂಜ ಗ್ರಾಮದ ತಂಟೆಪ್ಪಾಡಿ ಹರಿಶ್ಚಂದ್ರ ಮತ್ತು ಶ್ರೀಮತಿ ಜ್ಯೋತಿ ದಂಪತಿಯ ಪುತ್ರಿಯಾಗಿರುವ ಕು. ತನ್ವಿ ಚೊಕ್ಕಾಡಿ ಅಂಗ್ಲ ಮಾಧ್ಯಮ ಶಾಲೆ ಕುಕ್ಕುಜಡ್ಕದಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.