ಪಂಜ ಜೇಸಿ ಸಪ್ತಾಹ -2024

0

ಜೇಸಿಐ ಪಂಜ ಪಂಚಶ್ರೀಯ ಜೇಸಿ ಸಪ್ತಾಹದ ಅಂಗವಾಗಿ ಪರಿವಾರ ಪಂಜ ರೈತ ಉತ್ಪಾದಕ ಕಂಪನಿಯ ಸಹಭಾಗಿತ್ವದಲ್ಲಿ ಅ.15 ರಂದು ಕಾಳುಮೆಣಸಿನ ಕೃಷಿ ಸಾಧಕ ಸುರೇಶ್ ಬಲ್ನಾಡು ಅವರ ತೋಟಕ್ಕೆ ಭೇಟಿ ನೀಡಿ ವೀಕ್ಷಣೆ ಹಾಗೂ ಮಾಹಿತಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಕಾಳುಮೆಣಸಿನ ಕೃಷಿ ಸಾಧಕರಾದ ಸುರೇಶ್ ಬಲ್ನಾಡು ಅವರನ್ನು ಮುಖ್ಯ ಅತಿಥಿಗಳಾದ ಕಾರ್ಯಪ್ಪ ಗೌಡ ಚಿದ್ಗಲ್ ಅವರು ಸನ್ಮಾನಿಸಿ ಮಾತನಾಡಿದರು.

ಮಾಹಿತಿ ಕಾರ್ಯಾಗಾರದ ಸಭಾಧ್ಯಕ್ಷತೆಯನ್ನು ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ ಜೀವನ್ ಮಲ್ಕಜೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಸುರೇಶ್ ಬಲ್ನಾಡು ಹಾಗೂ ಅಜಿತ್ ಪ್ರಸಾದ್ ರೈ ಕಾಳುಮೆಣಸಿನ ಕೃಷಿ ಬಗ್ಗೆ ಮಾಹಿತಿ ಹಾಗೂ ರೈತರ ಪ್ರಶ್ನೆಗಳಿಗೆ ಉತ್ತರಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಫಿ ಬೆಳೆ ಸಾಧ್ಯತೆ ಬಗ್ಗೆ ಚಂದ್ರಶೇಖರ ತಾಳ್ತಜೆ ಮಾಹಿತಿ ನೀಡಿದರು. ಸುದ್ದಿ ಬಿಡುಗಡೆ ಪತ್ರಿಕೆ ಮುಖ್ಯಸ್ಥ ಡಾ. ಯು.ಪಿ ಶಿವಾನಂದ ಸುದ್ದಿ ಅರಿವು ಕೇಂದ್ರದ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಪರಿವಾರ ಪಂಜ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ತೀರ್ಥಾನಂದ ಕೊಡೆಂಕಿರಿ ಮಾತನಾಡಿದರು.ಪ್ರಗತಿ ಪರ ಕೃಷಿಕ ಕಾರ್ಯಪ್ಪ ಗೌಡ ಚಿದ್ಗಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅತಿಥಿಗಳನ್ನು ಗಗನ್ ಕಿನ್ನಿಕುಮ್ರಿ ವೇದಿಕೆಗೆ ಆಹ್ವಾನಿಸಿದರು, ಕಾರ್ತಿಕ್ ಐ.ವಿ.ಜೇಸಿವಾಣಿ ವಾಚಿಸಿದರು. ಸನ್ಮಾನಿತರಾದ ಸುರೇಶ್ ಬಲ್ನಾಡ್ ಇವರನ್ನು ಸೋಮಶೇಖರ ನೇರಳ ಪರಿಚಯಿಸಿದರು. ಜೇಸಿ ಅಧ್ಯಕ್ಷ ಜೀವನ್ ಮಲ್ಕಜೆ ಸ್ವಾಗತಿಸಿ ಕಾರ್ಯದರ್ಶಿ ಜೀವನ್ ಶೆಟ್ಟಿಗದ್ದೆ ವಂದಿಸಿದರು.

ಅ.19 ರ ತನಕ ನಿರಂತರ ಕಾರ್ಯಕ್ರಮ:
ಅ.16. ರಂದು ಸಂಜೆ ಗಂಟೆ 7 ರಿಂದ ಗುತ್ತಿಗಾರು ದೇವಿ ಸಿಟಿ ಕಾಂಪ್ಲೆಕ್ಸ್ ಸಭಾ ಭವನದಲ್ಲಿ ಸಾಧಕರಿಗೆ ಸನ್ಮಾನ ಮತ್ತು ನಗುವಿನ ಹಬ್ಬ ನಡೆಯಲಿದೆ . ಮುಖ್ಯ ಅತಿಥಿಯಾಗಿ ಸುಳ್ಯ ಟಿ ಎ ಪಿ ಸಿ ಎಂ ಎಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯರಾಮ್ ದೇರಪ್ಪಜ್ಜನ ಮನೆ, ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ ಪಾಲ್ಗೊಳ್ಳಲಿದ್ದಾರೆ. ನಾಟಿ ವೈದ್ಯ ಶ್ರೀಮತಿ ಪುಷ್ಪಾ ದೇವಿದಾಸ್ ಬುಡ್ಲೆಗುತ್ತು, ಭಾರತೀಯ ಸೇನೆಯೊಂದಿಗೆ ಬೈಕ್ ರ್‍ಯಾಲಿಯಲ್ಲಿ ಪಾಲ್ಗೊಂಡ 2000 ಕಿ.ಮಿ ಕ್ರಮಿಸಿದ ಸಾಹಸಿ ವೃಷ್ಠಿ ಮಲ್ಕಜೆ, ವಿಶ್ವ ದಾಖಲೆ ನಿರ್ಮಿಸಿದ ಯೋಗ ಪಟು ವಿಹಾನಿ ವಾಲ್ತಾಜೆ, ಮಂಗಳೂರು ವಿಶ್ವವಿದ್ಯಾನಿಲಯದ ರ್‍ಯಾಂಕ್ ವಿಜೇತೆ ಶ್ರಾವ್ಯ ಮುತ್ಲಾಜೆ ರವರನ್ನು ಜೇಸಿ ವಲಯ ಅಧ್ಯಕ್ಷ ಗಿರೀಶ್ ಎಸ್ ಪಿ ಸನ್ಮಾನಿಸಲಿದ್ದಾರೆ. ಆದರ್ಶ ಯೂತ್ ಕ್ಲಬ್ ಅಧ್ಯಕ್ಷ ಆಕರ್ಷ್ ಕುಳ್ಳಂಪಾಡಿ ಉಪಸ್ಥಿತರಿರುವರು. ನಗುವಿನ ಹಬ್ಬ ದಲ್ಲಿ ಕುಡ್ಲ ಕುಸಲ್ ತಂಡದಿಂದ ರವಿ ರಾಮಕುಂಜ ಅಭಿನಯದ ತೆಲಿಕೆದ ಕಮ್ಮೆನ ಪ್ರದರ್ಶನ ಗೊಳ್ಳಲಿದೆ.

ಅ.17 ರಂದು ಬೆಳಿಗ್ಗೆ ಗಂಟೆ 9 ರಿಂದ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ಸಭಾಭವನದಲ್ಲಿ ಮುಕ್ತ ಚಿತ್ರಕಲಾ ಮತ್ತು ಕೇರಂ ಸ್ಪರ್ಧೆ ಜರುಗಲಿದೆ. ಚಿತ್ರಕಲಾ ಸ್ಪರ್ಧೆ ಎಲ್‌ ಕೆ ಜಿಯಿಂದ 1 ನೇ ತರಗತಿ, 2ರಿಂದ 4ನೇ ತರಗತಿ, 5 ರಿಂದ 7 ನೇ ತರಗತಿ,8 ರಿಂದ 10 ನೇ ತರಗತಿ ಮತ್ತು ಸಾರ್ವಜನಿಕ ವಿಭಾಗದಲ್ಲಿ ಜರುಗಲಿದೆ.

ಅ.18 ರಂದು ಸಂಜೆ ಗಂಟೆ 6.30 ರಿಂದ ಪಂಜ ಲಯನ್ಸ್ ಭವನದಲ್ಲಿ ಕೌಟುಂಬಿಕ ತರಬೇತಿ ಕಾರ್ಯಗಾರ ನಡೆಯಲಿದೆ.

ಅ.19 ರಂದು ಸಂಜೆ ಗಂಟೆ 7 ರಿಂದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಬೆಳ್ಳಾರೆ ಜ್ಞಾನ ಗಂಗಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ ಪಿ ಉಮೇಶ್ ಪಾಲ್ಗೊಳ್ಳಲಿದ್ದಾರೆ. ಜೇಸಿಐ ಪಂಜ ಪಂಚಶ್ರೀ ಪೂರ್ವಾಧ್ಯಕ್ಷ ವಾಸುದೇವ ಮೇಲ್ಪಾಡಿ ರವರಿಗೆ ಕಮಲ ಪತ್ರ ಪುರಸ್ಕಾರ ನಡೆಯಲಿದೆ. ಜೇಸಿಐ ಪೂರ್ವ ವಲಯಾಧ್ಯಕ್ಷ ಪುರಂದರ ರೈ ಪರಸ್ಕರಿಸುವವರು. ಅಂತರಾಷ್ಟ್ರೀಯ ಈಜು ಪಟು ದಿಗಂತ್ ವಿ ಎಸ್, ಮೈಸೂರು ವಿಶ್ವವಿದ್ಯಾನಿಲಯದ ರ್‍ಯಾಂಕ್ ವಿಜೇತೆ ಪ್ರಜ್ಞಾ ಎ ಡಿಸೋಜ, ಉದಯೋನ್ಮುಖ ಯಕ್ಷಗಾನ ಭಾಗವತ ರಚನಾ ಚಿದ್ಗಲ್ ರವರು ಸನ್ಮಾನ ಸ್ವೀಕರಿಸಲಿದ್ದಾರೆ. ಪಂಚಶ್ರೀ ವಿದ್ಯಾನಿಧಿ ಸಮರ್ಪಣೆ ನಡೆಯಲಿದೆ . ಸಾಂಸ್ಕೃತಿಕ ಸಂಭ್ರಮದಲ್ಲಿ ಡ್ಯಾನ್ಸ್ ಮತ್ತು ಬೀಟ್ಸ್ ಮತ್ತು ಸಂಸ್ಥೆ ವಿದ್ಯಾರ್ಥಿಗಳಿಂದ ನೃತ್ಯ ಸಂಭ್ರಮ, ಲಕುಮಿ ತಂಡದ ಕುಸಾಲ್ದ ಕಲಾವಿದರ್ ಅಭಿನಯಿಸುವ ಅರವಿಂದ್ ಬೋಳಾರ್ ವಿಭಿನ್ನ ಪಾತ್ರದ ತುಳು ಹಾಸ್ಯಮಯ ನಾಟಕ ಒರಿಯಾಂಡಲಾ ಸರಿಬೋಡು ಪ್ರದರ್ಶನಗೊಳ್ಳಲಿದೆ.