15 ದಿನಗಳಲ್ಲಿ ನ್ಯಾಯ ಸಿಗದಿದ್ದರೆ ಸ್ಥಳದಲ್ಲಿ ಕುಳಿತು ಪ್ರತಿಭಟನೆ
ಕರ್ನಾಟಕ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ಅಧ್ಯಕ್ಷ ಗಿರಿಧರ ನಾಯ್ಕರಿಂದ ಪತ್ರಿಕಾಗೋಷ್ಠಿ
ಬಡ ದಲಿತ ಕುಟುಂಬಕ್ಕೆ ಸೇರಿದ ಜಾಗವನ್ನು ಸ್ಥಳೀಯ ನಿವಾಸಿಯೋರ್ವರು ಅತಿಕ್ರಮಣ ಮಾಡಿ ಅನ್ಯಾಯ ವೆಸಗಿದ್ದು, ಅಲ್ಲದೆ ಕುಟುಂಬದ ಸದಸ್ಯರನ್ನು ಹೈ ಕೋರ್ಟ್ ವರೆಗೆ ಹೋಗುವಾಗೆ ಮಾಡಿ ತುಂಬಾ ನೋವು ನೀಡುತ್ತಿದ್ದಾರೆ. ಆದ್ದರಿಂದ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು,ಮತ್ತು ಜನಪ್ರತಿನಿದಿನಗಳು ಕೂಡಲೇ ಸ್ಪಂದಿಸಿ 15 ದಿನಗಳಲ್ಲಿ ನ್ಯಾಯ ಕೊಡಿಸದಿದ್ದಲ್ಲಿ ಅದೇ ಜಾಗದಲ್ಲಿ ಈ ಕುಟುಂಬದ ಸದಸ್ಯರನ್ನು ಕೂರಿಸಿ ಪ್ರತಿಭಟಿಸುವುದಾಗಿ ಕರ್ನಾಟಕ ರಾಜ್ಯ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ರಾಜ್ಯ ಅಧ್ಯಕ್ಷ ಗಿರಿಧರ ನಾಯ್ಕ ರವರು ಅ.16 ರಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದ್ದಾರೆ.
ಈ ವೇಳೆ ಮಾತನಾಡಿದ ಅವರು ಸುಳ್ಯ ಸುಳ್ಯ ತಾಲೂಕಿನ ಪಂಬೆತ್ತಾಡಿ ಗ್ರಾಮದ, ಪರಿಶಿಷ್ಟ ಜಾತಿಗೆ ಸೇರಿದ ಚಂರ್ಬ ಮೇರರಿಗೆ ಮಂಜೂರಾದ ಸರ್ವೆ ನಂಬರ್ 184/1ಎ ರಲ್ಲಿ 1.36 ಎಕ್ರೆ ಜಮೀನನ್ನು ಸ್ಥಳೀಯ ನಿವಾಸಿ ಮೋನಪ್ಪ ಗೌಡ ಮತ್ತು ಇತರರು ಸೇರಿ ಅಕ್ರಮವಾಗಿ ಮಂಜೂರು ಗೊಳಿಸಿಕೊಂಡಿರುತ್ತಾರೆ.
ಈ ಜಮೀನು ಪರಿಶಿಷ್ಟ ಜಾತಿಗೆ ಸೇರಿದ ಚಂರ್ಬ ಮೇರ ಎಂಬವರಿಗೆ ಕಡತ ನಂಬ್ರ: NCRSR 506/78-79 ರಂತೆ 1978 ರಲ್ಲಿ ಮಂಜೂರು ಆಗಿರುತ್ತದೆ.
ಅಲ್ಲದೆ 1980 ರಂದು ಸಾಗುವಳಿ ಚೀಟು ನೀಡಿ SRT LND: 197/81-82 ಪೂರ್ಣಗೊಂಡಿದ್ದು, ಪಹಣಿ ದುರಸ್ತಿಯಾಗಿರುತ್ತದೆ. ಆದರೆ ಚಂರ್ಬ ಮೇರ ಇವರು 2005 ರಲ್ಲಿ ಮೃತಪಟ್ಟಿದ್ದು, ಅವರ ಮಗನಾದ ಚೋಮ ಮೇರ, ಇವರು ಸದ್ರಿ ಜಮೀನಿನ ವಾರಿಸುದಾರರಾಗಿರುತ್ತಾರೆ.
ಆದರೆ ಮೋನಪ್ಪ ಗೌಡ ಮತ್ತು ಇತರರು NCRSR 83/1991-92 ರಂತೆ 2013 ರಲ್ಲಿ ಸುಳ್ಳು ಮಾಹಿತಿಯನ್ನು ನೀಡಿ ಈ ಜಮೀನಿಗೆ ಸಾಗುವಳಿ ಚೀಟಿಯನ್ನು ಪಡೆದಿರುತ್ತಾರೆ.
ಈ ಆದೇಶದ ಮೇಲೆ ಚೋಮ ಮೇರರವರು ಪುತ್ತೂರು ಸಹಾಯಕ ಆಯುಕ್ತರಲ್ಲಿ ಆರ್.ವಿ.ಎಸ್.ಆರ್.77/13-14 ರಂತೆ ಮೇಲ್ಮನವಿ ಸಲ್ಲಿಸಿದ್ದು, ಮೇಲ್ಮನವಿಯು 27-10-2014 ವಜಾಗೊಂಡಿರುತ್ತದೆ.
ಈ ಜಮೀನು ಪರಿಶಿಷ್ಟ ಜಾತಿಗೆ ಸೇರಿದ ಚಂರ್ಬ ಇವರಿಗೆ ಮಂಜೂರಾಗಿದ್ದು ಪಿ.ಟಿ.ಸಿ.ಎಲ್ ಕಾನೂನಿಗೆ ಅನ್ವಯಿಸುವ ಜಮೀನಾಗಿದ್ದರಿಂದ, ಜಮೀನನ್ನು ಮೋನಪ್ಪ ಗೌಡ ಮತ್ತು ಇತರರು ಯಾವುದೇ ಕಂದಾಯ ಕಾಯ್ದೆಯಲ್ಲಿ ಮರಿಜೂರುಗೊಳಿಸಲು ಅಸಾಧ್ಯವಾಗಿರುತ್ತದೆ. ಆದ್ದರಿಂದ ಮೋನಪ್ಪ ಗೌಡ ಮತ್ತು ಇತರರು ಸೇರಿ ಪರಿಶಿಷ್ಟ ಜಾತಿಗೆ ಸೇರಿದ ಚೋಮ ಮೇರ, ಬಿನ್. ಚೆಂರ್ಬ ಮೇರ ಇವರ ಜಮೀನನ್ನು ಕಬಳಿಸುವ ದುರುದ್ದೇಶವನ್ನು ಹೊಂದಿ ಹಾಗೂ ಕಂದಾಯ ಅಧಿಕಾರಿಗಳೊಂದಿಗೆ ಕೈ ಜೋಡಿಸಿ ಕಾನೂನು ಬಾಹಿರವಾಗಿ ಅವರ ಹೆಸರಿಗೆ ಮಂಜೂರಗೊಳಿಸಿ ಬಡ ಕುಟುಂಬವನ್ನು ರಸ್ತೆಗೆ ತಂದು ನಿಲ್ಲಿಸಿರುವುದು ಸರಿಯಲ್ಲ.
ಈ ಬಗ್ಗೆ ನಾವು ಅನೇಕ ಭಾರಿ ನಮ್ಮ ಕ್ಷೇತ್ರದ ಮಾಜಿ ಹಾಗೂ ಹಾಲಿ ಶಾಸಕರ ಗಮನಕ್ಕೆ ನೀಡಿದ್ದರೂ ಇದುವರೆಗೆ ಯಾವುದೇ ಪ್ರಯೋಜನ ವಾಗಿಲ್ಲ. ಆದ್ದರಿಂದ ದಲಿತರಿಗೆ ಅವರು ಮಾಡುವ ಈ ಅನ್ಯಾಯವನ್ನು ಸಹಿಸಿ ಇರಲು ಸಾಧ್ಯವಿಲ್ಲ ಎಂದು ಹೇಳಿದರು. ಇದೀಗ ಈ ಪ್ರಕರಣವನ್ನು ಹೈ ಕೋರ್ಟ್ ನಲ್ಲಿ ಹಾಕಿ ಈ ಬಡ ಕುಟುಂಬದ ಸದಸ್ಯರನ್ನು ಅಲ್ಲಿಗೆ ಎಳೆದು ತಂದಿದ್ದಾರೆ. ದಲಿತರ ಜಾಗವನ್ನು ಯಾರಾದರೂ ಅತಿಕ್ರರಮಣ ಮಾಡಿದರೆ ಅವರು ನ್ಯಾಯಾಲಯಕ್ಕೆ ಹೋಗುವ ಅವಶ್ಯಕತೆ ಇಲ್ಲಾ ಎಂದು ಕೂಡ ಇದೆ. ಚೋಮ ಮೇರ ರವರಿಗೆ ಬೇರೆ ಎಲ್ಲಿಯೂ ಜಮೀನು ಇರುವುದಿಲ್ಲ. ಆದ್ದರಿಂದ ಮೋನಪ್ಪ ಗೌಡ ರವರಿಗೆ ಮಂಜೂರಾದ NCRSR 83/1991-92 ಸಾಗುವಳಿ ಚೀಟನ್ನು ರದ್ದು ಪಡಿಸಬೇಕಾಗಿಯೂ ಅಂಬೇಡ್ಕರ್ ತತ್ತ್ವ ರಕ್ಷಣಾ ವೇದಿಕೆ ಕರ್ನಾಟಕ ಇದರ ವತಿಯಿಂದ ವಿನಂತಿಸುತ್ತೇವೆ. ನಮ್ಮ ಆಕ್ಷೇಪಣೆಯನ್ನು ಮಾನ್ಯ ಮಾಡದೇ ಇದ್ದಲ್ಲಿ ಮುಂದೆ ಉಗ್ರ ಪ್ರತಿಭಟನೆಯನ್ನು ಮಾಡಲು ಸಿದ್ಧರಿದ್ದೇವೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ದಿವಂಗತ ಚೋಮಾ ರವರ ಪತ್ನಿ ಗಿರಿಜಾ, ಪುತ್ರರಾದ ಚಂದ್ರಶೇಖರ, ಸದಾನಂದ ಉಪಸ್ಥಿತರಿದ್ದರು.