ಮಂಗಳೂರಿನಲ್ಲಿ “ಸೆರೆನೋ” ಇಟಾಲಿಯನ್ ಜಿಲಾಟೋ ಐಸ್ಕ್ರೀಂ ಉತ್ಪಾದನಾ ಘಟಕ ಹಾಗೂ ಪಾರ್ಲರ್ ಉದ್ಘಾಟನೆ

0

ಮಂಗಳೂರಿನ ಬಿಜೈ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ದಿಂದ ಕದ್ರಿ ಪಾರ್ಕ್ ಗೆ ಹೋಗುವ ಮುಖ್ಯ ರಸ್ತೆಯಲ್ಲಿ ಯುವ ಉದ್ಯಮಿ ಪ್ರಣೇತ್ ಎಂ.ಬಿ. ಮಾಲಕತ್ವದ ಇಟಾಲಿಯನ್ ಜಿಲಾಟೋ ಐಸ್ಕ್ರೀಂ ಘಟಕ “ಸೆರೇನೋ” ಅ. 16 ರಂದು ಶುಭಾರಂಭಗೊಂಡಿದೆ.

ಶಾಸಕ ವೇದವ್ಯಾಸ ಕಾಮತ್ ನೂತನ ಸಂಸ್ಥೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಸುಳ್ಯದ ನಿವೃತ್ತ ಪ್ರಾಂಶುಪಾಲ ಪ್ರೊ. ಎಂ ಬಾಲಚಂದ್ರ ಮತ್ತು ಕಮಲ ದಂಪತಿಗಳ ಪುತ್ರ ಹಾಗೂ ಬೆಳ್ಳಾರೆ ಮೀನಾ ಎಂಟರ್ಪ್ರೈಸಸ್ ಮಾಲೀಕ ರಾದ ಗಣೇಶ್ ಭಟ್ ಹಾಗೂ ಸುಧಾ ದಂಪತಿಗಳ ಪುತ್ರಿ ಪ್ರಾಂಜಲಿ ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ಇಟಲಿಯನ್ ಜಿಲಾಟೊ ಉತ್ಪಾದನಾ ತರಬೇತಿ ಪಡೆದು ಮಂಗಳೂರಲ್ಲಿ ಮೊದಲ ಘಟಕ ಸ್ಥಾಪಿಸಿದ್ದಾರೆ.

ಜಿಲಾಟೋ ಐಸ್ಕ್ರೀಂ ಸಾಮಾನ್ಯ ಐಸ್ಕ್ರೀಂಗಿಂತ ವಿಭಿನ್ನವಾಗಿದ್ದು ಆರೋಗ್ಯ ದೃಷ್ಟಿಯಿಂದ ತುಂಬಾ ಉತ್ತಮವಾಗಿದೆ. ಇದರಲ್ಲಿ ಯಾವುದೇ ಕೃತಕ ವಸ್ತುಗಳನ್ನು ಬಳಸುವುದಿಲ್ಲ. ತಾಜಾ ಹಣ್ಣುಗಳು ಮತ್ತು ಹಾಲನ್ನು ಬಳಸಲಾಗುತ್ತದೆ.ಇದರಲ್ಲಿ ನೀರಿನ ತೇವಾoಶ ತೀರಾ ಕಡಿಮೆ ಎಂದು ಮಾಲಕರು ತಿಳಿಸಿದರು.

ಯುವ ಉದ್ಯಮಿ ಪ್ರಣೇತ್ ಮತ್ತು ಪ್ರಾಂಜಲಿಯರಿಗೆ ಮಂಗಳೂರಿನ ಖ್ಯಾತ ದಂತ ವೈದ್ಯ ಡಾ. ಅಜಿತ್ ರೈ, ಮನೋಹರ ಆಳ್ವ, ಲಕ್ಷ್ಮೀನಾರಾಯಣ ಶೆಟ್ಟಿ, ರಮಾನಾಥ್ ಭಂಡಾರಿ,ಸುದರ್ಶನ್ ರಾವ್, ಡಾ.ಗೋವರ್ಧನ್ ರಾವ್, ಉಮಾ ರಾವ್, ಡಾ. ಸುಷ್ಮಾ, ವೆಂಕಟ್ರಮಣ ಭಟ್,ಹರಿಪ್ರಸಾದ್ ಸಾರಡ್ಕ,
ರಿತ್ವಿಕ್ ಕದ್ರಿ, ಮಾಜಿ ಮೇಯರ್ ದಿವಾಕರ್ ಕದ್ರಿ , ನೀರಜ ದಿವಾಕರ್ ಪ್ರದೀಪ್ ಮರಗೋಡು, ಶ್ರೀಮತಿ ಪ್ರಿಯಾ ಪ್ರದೀಪ್ ಮರಗೋಡು, ರಾಘವೇಂದ್ರ ರಾವ್ ಬೆಂಗಳೂರು ಹಾಗೂ ಸಂಬಂಧಿಕರು, ಮಿತ್ರರು, ಹಿತೈಷಿಗಳು ಶುಭಹಾರೈಸಿದರು.