ಸುಳ್ಯದ ಗಾಯಕ, ಸಾಹಿತಿ, ಜ್ಯೋತಿಷಿ ಎಚ್ ಭಿಮರಾವ್ ವಾಷ್ಠರ್ ಅವರ ನೇತೃತ್ವದಲ್ಲಿ ಅದ್ದೂರಿ ವಾಷ್ಠರ್ ಫೈವ್ ಸ್ಟಾರ್ ಆರ್ಕೆಸ್ಟ್ರಾ ಕಾರ್ಯಕ್ರಮವು ಸುಳ್ಯದ ಖಾಸಗಿ ಬಸ್ ನಿಲ್ದಾಣದಲ್ಲಿ ದಸರಾ ಶೋಭಾ ಯಾತ್ರೆಯ ದಿನವಾದ ಅಕ್ಟೋಬರ್ 17ರಂದು ಸಂಜೆ ಜರುಗಿತು.
ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗ ಮತ್ತು ಸಪ್ತಸ್ವರ ಮೆಲೋಡಿಸ್ ಜಂಟಿ ಸಹಯೋಗದಲ್ಲಿ ಸಂಗೀತ ರಸಮಂಜರಿ ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಎಚ್. ಭೀಮರಾವ್ ವಾಷ್ಠರ್ ವಹಿಸಿದ್ದರು. ನಿವೃತ್ತ ತಾಂತ್ರಿಕ ಕೃಷಿ ಅಧಿಕಾರಿ ಮೋಹನ್ ನಂಗಾರು ಕಾರ್ಯಕ್ರಮ ಉದ್ಘಾಟಿಸಿದರು.
ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಇದರ ಕಾರ್ಯದರ್ಶಿ ಕೆ.ಸಿ ಅಕ್ಷಯ್ ಅವರು ಶುಭ ಹಾರೈಸಿದರು.
ಗೌರವ ಉಪಸ್ಥಿತಿಯಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಸಾಂಸ್ಕೃತಿಕ ಮತ್ತು ಕಲಾ ಸಂಘದ ಗೌರವ ಅಧ್ಯಕ್ಷ ಎಂ. ವೆಂಕಪ್ಪ ಗೌಡ ಅವರು ಪ್ರಾಸ್ತಾವಿಕ ನುಡಿಗಳ ಜೊತೆ 9 ವರ್ಷಗಳಿಂದ ನಡೆಸುತ್ತಿರುವ ಸಂಗೀತ ರಸಮಂಜರಿ ಕಾರ್ಯಕ್ರಮದ ಕುರಿತು ಮಾತನಾಡಿದರು.
ಮುತ್ತು ಕೃಷಿಕ ನವೀನ್ ಜಾತುಬಾಯಿ ಮತ್ತು ಮಂಗಳೂರು ಸಬ್ ಇನ್ ಸ್ಪೆಕ್ಟರ್ ಶ್ರೀ ಸುಬ್ರಾಯ್ ಕಲ್ಪನೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ವೇದಿಕೆಯಲ್ಲಿರುವ ಎಲ್ಲ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕೇರಳದ ಖ್ಯಾತ ಗಾಯಕರಾದ ಕಿರಣ್ ಕುಮಾರ್ ಕಾಸರಗೋಡು ಮತ್ತು ಚೈತ್ರ ಮಹೇಶ್ ಹಾಗೂ ಕವಿತಾ ದಿನಕರ್ ಪುತ್ತೂರುರವರು ಅತಿಥಿ ಗಾಯಕರಾಗಿ ಅನೇಕ ಅದ್ಭುತ ಸೂಪರ್ ಹಿಟ್ ಹಾಡುಗಳನ್ನು ಹಾರಿ ಸಂಭ್ರಮಿಸಿದರು. ಅರುಣ್ ಜಾಧವ್, ವಾಷ್ಠರ್, ವಿಜಯ್ ಕುಮಾರ್ ಮತ್ತು ಕುಸುಮಧರ್ ಕೂಡ ಅನೇಕ ಹಾಡುಗಳನ್ನು ಹಾಡಿ ಪ್ರೇಕ್ಷಕರ ಮನಸ್ಸನ್ನು ರಂಜಿಸಿದರು. ದೀಪಾ ಸೌಂಡ್ಸ್ ಕಾಣಿಯೂರು ಇವರು ಧ್ವನಿ ಮತ್ತು ಬೆಳಕನ್ನು ನೀಡಿ ಸಹಕರಿಸಿದರು. ಕುಸುಮಾಧರ ರೈ ಬೂಡುರವರು ಸ್ವಾಗತಿಸಿದರು. ಸಪ್ತಸ್ವರ ಮೆಲೋಡಿಸ್ ಇದರ ಅಧ್ಯಕ್ಷ ಅರುಣ್ ರಾವ್ ಜಾದವ್ ವಂದಿಸಿದರು. ಗಾಯಕ ವಿಜಯಕುಮಾರ್ ಸುಳ್ಯ ಸಹಕರಿಸಿದರು. ರೋಹಿತ್ ಕುರಿಕ್ಕಾರ್ ರವರು ಕಾರ್ಯಕ್ರಮ ನಿರೂಪಿಸಿದರು.