ಡಾ. ಶಿಶಿಲರಿಗೆ ಕಾಂತಾವರ ಸಾಹಿತ್ಯ ಪ್ರಶಸ್ತಿ

0

ಸುಳ್ಯ ನೆಹರೂ ಮೆಮೋರಿಯಲ್ ಕಾಲೇಜಿನ ಪೂರ್ವ ಪ್ರಾಂಶುಪಾಲ, ಹಿರಿಯ ಸಾಹಿತಿ ಡಾ. ಬಿ. ಪ್ರಭಾಕರ ಶಿಶಿಲರು 2024ರ ಕಾಂತಾವರ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಮೊಗಸಾಲೆ ಕುಟುಂಬದವರು ಕೊಡ ಮಾಡಿರುವ ಈ ಪ್ರಶಸ್ತಿಯು ರೂಪಾಯಿ ಹತ್ತು ಸಾವಿರ ನಗದು. ತಾಮ್ರ ಪತ್ರ, ಶಾಲು, ಸ್ಮರಣಿಕೆ ಮತ್ತು ಪ್ರಯಾಣ ವೆಚ್ಚವನ್ನು ಒಳಗೊಂಡಿದೆ.

ಡಾ. ಶಿಶಿಲರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಐವತ್ತಮೂರು ಕೃತಿಗಳನ್ನು ರಚಿಸಿದ್ದಲ್ಲದೆ. ಕಾಲೇಜು ಸಾಹಿತ್ಯ ಸಂಘ ಮತ್ತು ಸ್ವಂತಿಕಾ ಸಾಹಿತ್ಯ ಸ್ಥಾಪಿಸಿ. ನೂರಕ್ಕೂ ಮಿಕ್ಕು ಕೃತಿಗಳನ್ನು ಮಲೆಯಾಳಂ, ತೆಲುಗು ಮತ್ತು ಅರೆಭಾಷೆಗಳಿಗೆ ಅನುವಾದಗೊಂಡು ಹಲವಾರು ಪ್ರಶಸ್ತಿಗಳಿಗೆ ಪ್ರಕಟಿಸಿರುತ್ತಾರೆ. ಇವರ ಪುಂಸ್ತ್ರೀ ಮತ್ತು ಮತ್ಸ್ಯಗಂಧಿ ಕಾದಂಬರಿಗಳು ಇಂಗ್ಲೀಷ್, ಸಂಸ್ಕೃತ, ಮಲಯಾಳಂ, ತೆಲುಗು ಮತ್ತು ಅರೆಭಾಷೆಗಳಿಗೆ ಅನುವಾದಗೊಂಡು ಹಲವು ಪ್ರಶಸ್ತಿಗಳಿಗೆ ಭಾಜನವಾಗಿದೆ.

ಕಾಂತಾವರ ಸಾಹಿತ್ಯ ಪ್ರಶಸ್ತಿಯನ್ನು ನವೆಂಬರ್ 1 ರಂದು ನಡೆಯುವ ಕಾಂತಾವರ ಉತ್ಸವದಲ್ಲಿ ರಾಜ್ಯ ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅವರು ಪ್ರದಾನ ಮಾಡಲಿರುವರು. ಸಮಾರಂಭವು ಕಾಂತಾವರ ಕನ್ನಡ ಸಂಘ ಭವನದಲ್ಲಿ ನಡೆಯಲಿದೆ ಎಂದು ಅಧಿಕೃತವಾಗಿ ತಿಳಿದು ಬಂದಿದೆ.