ಅ.30ರಿಂದ ನಾಮಪತ್ರ ಸಲ್ಲಿಕೆಗೆ ಅವಕಾಶ
ಸುಳ್ಯ ತಾಲೂಕು ರಾಜ್ಯ ಸರ್ಕಾರಿ ನೌಕರರ ಯೋಜನಾ ಶಾಖೆಗಳ ಅಧ್ಯಕ್ಷರು , ಖಜಾಂಚಿ ಮತ್ತು ರಾಜ್ಯ ಪರಿಷತ್ ಸದಸ್ಯತ್ವ ಸ್ಥಾನಕ್ಕೆ ನ.16ರಂದು ಚುನಾವಣೆ ನಡೆಯಲಿದೆ.
ಚುನಾವಣಾ ವೇಳಾಪಟ್ಟಿಯಂತೆ ನಾಮಪತ್ರ ಸಲ್ಲಿಸಲು ಅ. 30 ರಿಂದ ನ. 07ರ ತನಕ ಅವಕಾಶವಿದೆ.
ನಾಮಪತ್ರ ಪರೀಶೀಲನೆ ನ.08ರಂದು ನಡೆಯುವುದು. ನಾಮಪತ್ರ ಪರೀಶೀಲನೆಯ ನಂತರ ಅದೇ ದಿನ ಅರ್ಹ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದೆ. ನ. 11ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನ. ಅವಶ್ಯಕತೆ ಇದ್ದಲ್ಲಿ ನ.16 ರಂದು ಮತದಾನವು ಸುಳ್ಯ ಶಾಖೆಯ ಸರ್ಕಾರಿ ನೌಕರರ ಭವನದಲ್ಲಿ ನಡೆಯಲಿದೆ . ಅದೇ ದಿನ ಮತ ಎಣಿಕೆ ಕಾರ್ಯ ನಡೆದು ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದು ಚುನಾವಣಾ ಅಧಿಕಾರಿ ನಿವೃತ್ತ ಶಿಕ್ಷಕ ಅಚ್ಯುತ ಪಿ ತಿಳಿಸಿದ್ದಾರೆ.