ಸುಳ್ಯದ ಜಟ್ಟಿಪಳ್ಳ ವಿಶ್ವ ಕಾಂಪ್ಲೆಕ್ಸ್ ನಲ್ಲಿ ಶರತ್ ಕುಡೆಕಲ್ಲು ಮತ್ತು ರಿತೇಶ್ ಕುಮಾರ್ ಇಜ್ಜಿಲುಮಕ್ಕಿ ಯವರ ಪಾಲುದಾರಿಕೆಯ ಆರ್ಟ್ ಗ್ಯಾಲರಿ ಫೋಟೋ ಫ್ರೇಮ್ಸ್ ಮತ್ತು ಡಿಜಿಟಲ್ ಪೈಂಟಿಂಗ್ ಮಳಿಗೆಯು ನ.8 ರಂದು ಶುಭಾರಂಭ ಗೊಂಡಿತು.
ಕುಡೆಕಲ್ಲು ಮನೆತನದ ಹಿರಿಯರಾದ ಟಿ.ಎ.ಪಿ.ಸಿ.ಎಂ.ಎಸ್ ಸೊಸೈಟಿ ನಿವೃತ್ತ ಸಿ.ಇ.ಒ ವಾಸುದೇವ ಗೌಡ ಕುಡೆಕಲ್ಲು ರವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಶಿಕಲಾ ನೀರಬಿದಿರೆ, ವಿಶ್ವ ಕಾಂಪ್ಲೆಕ್ಸ್ ಮಾಲಕ ಸಂದೇಶ್ ಕುರುಂಜಿ, ನಿವೃತ್ತ ಎ.ಎಸ್.ಐ ಶಾಂತಪ್ಪ ಗೌಡ ಇಜ್ಜಿಲುಮಕ್ಕಿ, ವಿಷ್ಣು ಅಗ್ರಿ ಸೊಲ್ಯೂಷನ್ಸ್ ಮಾಲಕ ತೇಜಕುಮಾರ್ ಕುಡೆಕಲ್ಲು, ಪುತ್ತೂರು ಸ್ಮಾರ್ಟ್ ಸಾಫ್ಟ್ವೇರ್ ಟೆಕ್ನೋಲಜಿಯ ಪಾಲುದಾರರಾದ ರೊ.ಸತೀಶ್ ನಾಯಕ್, ಹರಿಪ್ರಸಾದ್ ಪ್ರಭು ರವರು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸ್ಥಳೀಯರಾದ ದೀಕ್ಷಾ ಟ್ರೇಡರ್ಸ್ ಮಾಲಕ ಮಾಧವ ರಾವ್, ಚಕ್ರಪಾಣಿ ವಾಗ್ಲೆ, ಜನಾರ್ದನ ದೋಳ, ಚಿದಾನಂದ ವಿದ್ಯಾನಗರ, ಅಚ್ಚುತ ಕುಡೆಕಲ್ಲು, ಉದಯ ಕುಡೆಕಲ್ಲು,
ರವಿ ಕುಡೆಕಲ್ಲು, ಶಿವರಾಮ ಕುಡೆಕಲ್ಲು, ಗುರುಪ್ರಸಾದ್ ಕುಡೆಕಲ್ಲು, ಪ್ರದೀಪ್ ವಿಷ್ಣು ಸರ್ಕಲ್, ರಾಕೇಶ್ ಕುಡೆಕಲ್ಲು, ಕೃತೇಶ್ ಆಲೆಟ್ಟಿ ಹಾಗೂ ಪಾಲುದಾರರ ಬಂಧು ಮಿತ್ರರು ಉಪಸ್ಥಿತರಿದ್ದರು.
ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ವಿನೀತ್ ಕುಡೆಕಲ್ಲು ಸಹಕರಿಸಿದರು.
ನೂತನ ಸಂಸ್ಥೆಯಲ್ಲಿ ಡಿಜಿಟಲ್ ಫೋಟೋ ಫ್ರೇಮ್ಸ್, ಕಸ್ಟಮೈಸ್ ಫ್ರೇಮ್ಸ್, ಎಲ್.ಇ.ಡಿ.ಫ್ರೇಮ್ಸ್, ಗಿಫ್ಟ್ ಫ್ರೇಮ್ಸ್, ಡಿಜಿಟಲ್ ಪೈಂಟಿಂಗ್ಸ್, ಹಳೆಯ ಫೋಟೋ ರಿಕವರಿ, ಮರ್ಜ್ ಪೈಂಟಿಂಗ್, ಫೋಟೋ ಪ್ರಿಂಟ್,
ವೆಬ್ ಡಿಸೈನ್, ಬಿಲ್ಲಿಂಗ್ ಸಾಫ್ಟ್‌ವೇರ್, ಸಿವಿಲ್ 2ಡಿ ಮತ್ತು 3ಡಿ ಪ್ಲಾನ್,ವಾಸ್ತು ಪ್ಲ್ಯಾನ್, 3 ಡಿ ಹೋಮ್ ಚಿತ್ರ , ಅನಿಮೇಷನ್ ವರ್ಕ್ ಮತ್ತು ಗ್ರಾಫಿಕ್ ಡಿಸೈನ್ ವರ್ಕ್ ಮಾಡಿಕೊಡಲಾಗುವುದು ಎಂದು ಪಾಲುದಾರರು ತಿಳಿಸಿದರು.