ಉಬರಡ್ಕ ಮಿತ್ತೂರು ಗ್ರಾಮದ ದಿ.ಬಾಳಪ್ಪ ಶೆಟ್ಟಿ ಯವರ ಪತ್ನಿ ಶ್ರೀಮತಿ ಲೀಲಾವತಿ ಶೆಟ್ಟಿ ಯವರು ನ.8 ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಇವರಿಗೆ 81 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ದಯಾನಂದ ಶೆಟ್ಟಿ, ಸದಾನಂದ ಶೆಟ್ಟಿ, ಸೊಸೆ ಉಬರಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕಿ ಶ್ರೀಮತಿ ಶಾರದಾ ಡಿ.ಶೆಟ್ಟಿ, ಶ್ರೀಮತಿ ಸುನಿತಾ ಶೆಟ್ಟಿ, ಮತ್ತು ಮೊಮ್ಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.