ಡಾ. ಶಿವರಾಮ ಕಾರಂತರ ಜನ್ಮದಿನಾಚರಣೆಯ ಅಂಗವಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಗ್ರಾಮ ಪಂಚಾಯತುಗಳಿಗೆ ಡಾ. ಶಿವರಾಮ ಕಾರಂತ 2024 ಪ್ರಶಸ್ತಿಯನ್ನು ನೀಡುತ್ತಿದ್ದು, ತೆರಿಗೆ ಸಂಗ್ರಹಣೆ ಹಿನ್ನಲೆಯಲ್ಲಿ ಈ ಪ್ರಶಸ್ತಿಗೆ ಸುಳ್ಯ ತಾಲೂಕಿನ ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ಆಯ್ಕೆಯಾಗಿದ್ದು, ಪ್ರಶಸ್ತಿಯನ್ನು ನ.10ರಂದು ಉಡುಪಿ ಜಿಲ್ಲೆಯ ಕೋಟತಟ್ಟು ಗ್ರಾಮ ಪಂಚಾಯತ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೇಘಾಲಯದ ಗೌರವಾನ್ವಿತ ರಾಜ್ಯಪಾಲರಾದ ವಿಜಯ ಶಂಕರ್ ಅವರು ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ನ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಸೂಂತೋಡುರವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಚಿತ್ರಕುಮಾರಿ , ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿಚಂದ್ರ, ಸದಸ್ಯರುಗಳಾದ ಶ್ರೀಮತಿ ಭವಾನಿ ಮೂರ್ಜೆ, ಶ್ರಿಮತಿ ಮಮತಾ ಕುದ್ಪಾಜೆ, ಪ್ರಶಾಂತ್ ಪಾನತ್ತಿಲ, ಅನಿಲ್ ಬಳ್ಳಡ್ಕ, ಸಂದೀಪ್ ಕುತ್ತಮೊಟ್ಟೆ ಮತ್ತು ಸಿಬ್ಬಂದಿಗಳಾದ ರಜೀಶ್ ನೀರಬಿದಿರೆ, ಜನಾರ್ಧನ ಕೆ, ಪುರುಷೋತ್ತಮ, ಪ್ರವೀಣ್, ಗೀತಾ, ರಂಜನ್, ಅಖಿಲೇಶ್ ಮೊದಲಾದವರು ಉಪಸ್ಥಿತರಿದ್ದರು.