ಪೈಲಾರು ಶೌರ್ಯ ಯುವತಿ ಮಂಡಲದ ವಾರ್ಷಿಕ ಮಹಾಸಭೆ

0

ಶೌರ್ಯ ಯುವತಿ ಮಂಡಲ (ರಿ ) ಪೈಲಾರು ಇದರ 2023-2024ನೇ ಸಾಲಿನ ವಾರ್ಷಿಕ ಮಹಾಸಭೆಯು ನ. 10 ರಂದು ಮಿತ್ರವೃಂದ ಸಭಾಂಗಣದಲ್ಲಿ ನಡೆಯಿತು.

ಈ ಸಭೆಯಲ್ಲಿ 2024- 2025 ನೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ನೂತನ ಅಧ್ಯಕ್ಷರಾಗಿ ಕಮಲಾಕ್ಷಿ ಗುಡ್ಡೆಮನೆ ಆಯ್ಕೆಯಾದರು. ಕಾರ್ಯದರ್ಶಿಯಾಗಿ ಪುಷ್ಪಲತಾ ನಾಯರ್ ಕಲ್ಲು ಹಾಗೂ ಖಜಾಂಜಿಯಾಗಿ ಜಯಶ್ರೀ ಕುಳ್ಳಂಪಾಡಿ ಆಯ್ಕೆಗೊಂಡರು.

ಉಪಾಧ್ಯಕ್ಷರಾಗಿ ಶ್ವೇತ ನಾಯರ್ ಕಲ್ಲು , ಜತೆ ಕಾರ್ಯದರ್ಶಿಯಾಗಿ ಶ್ರೀಲತಾ ದಾತಡ್ಕ ಆಯ್ಕೆಯಾದರು.

ಸಭೆಯ ಅಧ್ಯಕ್ಷತೆಯನ್ನು ಯುವತಿ ಮಂಡಲದ ಅಧ್ಯಕ್ಷರಾದ ರಾಜೀವಿ ಗೋಳ್ಯಾಡಿ ಇವರು ವಹಿಸಿದ್ದರು. ಮುಖ್ಯ ಅತಥಿಯಾಗಿ ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷರಾದ ವಿಜಯ ಕುಮಾರ್ ಉಬರಡ್ಕ ಆಗಮಿಸಿದ್ದರು. ಸಭೆಯಲ್ಲಿ ಗೌರವ ಸಲಹೆಗಾರರಾದ ಮನೋರಮ ಕಡಪಳ ಹಾಗೂ ಕಾರ್ಯದರ್ಶಿ ಶ್ವೇತಾ ನಾಯರ್ ಕಲ್ಲು ಉಪಸ್ಥಿತರಿದ್ದರು.

ಉದ್ಘಾಟನೆಗೈದ ವಿಜಯ ಕುಮಾರ್ ಉಬರಡ್ಕ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಯುವತಿ ಮಂಡಲದ ಸದಸ್ಯೆಯಾದ ವಿದುಷಿ ಜಯಶ್ರೀ ಕುಳ್ಳಂಪಾಡಿ ಯವರಿಗೆ ಸನ್ಮಾನ ನಡೆಯಿತು.

ಯುವತಿ ಮಂಡಲದ ವಾರ್ಷಿಕ ವರದಿಯನ್ನು ಶ್ವೇತ ನಾಯರ್ ಕಲ್ಲು ಮತ್ತು ಖರ್ಚು ವೆಚ್ಚದ ವಿವರವನ್ನು ಹಸ್ತವಿ ಮಂಡಿಸಿದರು.

ರಸ್ತೆ ಅಪಘಾತದಲ್ಲಿ ಮೃತಪಟ್ಟ ರಚನಾ ಕಾಡುತೋಟ ಇವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಅನುಷಾ ದಾತಡ್ಕರವರು ಪ್ರಾರ್ಥಿಸಿದರು. ಭವ್ಯ ನಾಯರ್ ಕಲ್ಲು ಸ್ವಾಗತಿಸಿದರು. ಪುಷ್ಪಲತಾ ನಾಯರ್ ಕಲ್ಲು ಧನ್ಯವಾದ ಮಾಡಿದರು. ಚರಿಷ್ಮ ಕಡಪಳ ಕಾರ್ಯಕ್ರಮ ನಿರೂಪಿಸಿದರು.