ಕೇನ್ಯ ಸ.ಕಿ.ಪ್ರಾ ಶಾಲೆಯಲ್ಲಿ ನ. 13 ರಂದು ಮಂಗಳೂರು ರಿಫೈನರಿ ಮತ್ತು ಪೆಟ್ರೋಲ್ ಕೆಮಿಕಲ್ಸ್ ಲಿಮಿಟೆಡ್ ( MRPL) ವತಿಯಿಂದ ಬಿಡುಗಡೆಯಾದ 7ಲಕ್ಷ ರೂಪಾಯಿ ಮೊತ್ತದ ಅನುದಾನದಿಂದ ನೂತನ ಶೌಚಾಲಯ ಕೊಠಡಿ ಕಾಮಗಾರಿಯ ಶಂಕು ಸ್ಥಾಪನೆ ಕಾರ್ಯಕ್ರಮವನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು|ಭಾಗೀರಥಿ ಮುರುಳ್ಯ ಗುದ್ದಲಿ ಪೂಜೆ ನಡೆಸುವುದರ ಮೂಲಕ ವಿಧ್ಯುಕ್ತವಾಗಿ ಚಾಲನೆ ನಡೆಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ರಾಜೀವ ಗೌಡ ಕಣ್ಕಲ್, ಶ್ರೀಮತಿ ಕುಸುಮಾವತಿ ರೈ ಗೆಜ್ಜೆ, ಗ್ರಾಮವಿಕಾಸ ಸಮಿತಿ ಅಧ್ಯಕ್ಷರಾದ ವಿನೋದ್ ಗೌಡ ಬೊಳ್ಮಲೆ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ವಾಸುದೇವ ಗೌಡ ಆನೆಮನೆ, ಉಪಾಧ್ಯಕ್ಷರಾದ ಟೀನಾ ಸಿ ನರಿಯಂಗ, ಎಸ್.ಡಿ.ಎಂ.ಸಿ. ಸದಸ್ಯರುಗಳಾದ ಪದ್ಮನಾಭ ಕೆರೆಕ್ಕೋಡಿ , ಗೋಪಾಲಕೃಷ್ಣ ಕಾಪುತಮೂಲೆ, ಶಿವಾನಂದ ಮಜ್ಜಾರ್ ಕಡವು, ಶ್ರೀಮತಿ ಗೀತಾ ರೈ, ಶ್ರೀಮತಿ ಭವಾನಿ, ಶ್ರೀಮತಿ ಕೋಮಲಾಕ್ಷಿ, ಶ್ರೀಮತಿ ಲೇಖಾ, ಶ್ರೀಮತಿ ಯಮುನಾ, ಮಾಜಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಪುಟ್ಟಣ್ಣ ಗೌಡ ಕುಂಜತ್ತಾಡಿ, ಜ್ಞಾನದೀಪ ಶಿಕ್ಷಕರಾದ ಶ್ರೀಮತಿ ಸಂಗೀತ ಹಾಗೂ ಪೋಷಕವೃಂದ ಮತ್ತು ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.
ಶಾಲಾ ಮುಖ್ಯಶಿಕ್ಷಕಿ ಶ್ರೀಮತಿ ಪ್ರೇಮಾ ಜಗದೀಶ್ ಅಂಬೆಕಲ್ಲು ಸ್ವಾಗತಿಸಿದರು. ಶಾಲಾ ಗೌರವ ಶಿಕ್ಷಕಿ ಕು. ತುಲಶ್ರೀ.ಪಿ. ಇವರು ಧನ್ಯವಾದ ಸಮರ್ಪಿಸಿದರು.