ಸುಳ್ಯದ ಜಟ್ಟಿಪಳ್ಳ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆಯನ್ನು ನ.14 ರಂದು ಆಚರಿಸಲಾಯಿತು.
ಅಂಗನವಾಡಿ ಪುಟಾಣಿ ಜಿ.ಸಿ.ಪ್ರಜ್ವಲ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವೇದಿಕೆಯಲ್ಲಿ ನ್ಯಾಯವಾದಿ ದಿನೇಶ್ ಮಡಪ್ಪಾಡಿ, ಬಾಲವಿಕಾಸ ಸಮಿತಿ ಅಧ್ಯಕ್ಷೆ ಶ್ರೀಮತಿ ಜಯಲಕ್ಷ್ಮಿ, ನ.ಪಂ.ಸದಸ್ಯೆ ಶ್ರೀಮತಿ ಸರೋಜಿನಿ ಪೆಲ್ತಡ್ಕ, ಮಹಿಳಾ ಮಂಡಲದ ಖಜಾಂಚಿ ಶ್ರೀಮತಿ ಸವಿತಾ ಆಚಾರ್ಯ ಮತ್ತು ಫ್ರೆಂಡ್ಸ್ ಕ್ಲಬ್ ಸದಸ್ಯೆ ಶ್ರೀಮತಿ ಭಾರತಿ ಉಪಸ್ಥಿತರಿದ್ದರು.
ಬಾಲವಿಕಾಸ ಸಮಿತಿ, ಅಮೃತ ಸ್ತ್ರೀ ಶಕ್ತಿ ಸಂಘ ಮತ್ತು ಮಾನಸ ಮಹಿಳಾ ಮಂಡಲದ ಸಹಕಾರದೊಂದಿಗೆ ನಡೆದ ಈ ಮಕ್ಕಳ ದಿನಾಚರಣೆಯನ್ನು ಮಕ್ಕಳ ನಾಡಗೀತೆಯಿಂದ ಪ್ರಾರಂಭಿಸಲಾಯಿತು. ಬಳಿಕ ವಿವಿಧ ವಿನೋದಾವಳಿ ಆಟೋಟ ಮತ್ತು ಚದ್ಮವೇಷ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಅಂಗನವಾಡಿ ಕಾರ್ಯಕರ್ತೆ ಕುಸುಮಾವತಿ ಸ್ವಾಗತಿಸಿ, ಸವಿತಾ ಆಚಾರ್ಯ ಧನ್ಯವಾದ ಸಲ್ಲಿಸಿದರು.