ಅಮರಮುಡ್ನೂರು ಗ್ರಾಮದ ಪೈಲೂರಿನ ಹಿರಿಯ ವೈದ್ಯರಾದ ಡಾ. ಗೋಪಾಲಕೃಷ್ಣ ಪೈಲೂರು (ಡಾ. ಜಿ.ಕೆ. ಭಟ್) ಅಸೌಖ್ಯದಿಂದ ನ. 18ರಂದು ಸುಳ್ಯದ ಕೆ.ವಿ.ಜಿ. ಆಸ್ಪತ್ರೆಯಲ್ಲಿ ನಿಧನರಾದರು. ಇವರಿಗೆ 93 ವರ್ಷ ವಯಸ್ಸಾಗಿತ್ತು.
ಮದ್ರಾಸ್ ನಲ್ಲಿ ತಮ್ಮ ವೈದ್ಯಕೀಯ ವಿದ್ಯಾಭ್ಯಾಸ ಮುಗಿಸಿ ತಮ್ಮ ತಂದೆ ಮಿತ್ತಮಜಲು ಮಹಾಬಲೇಶ್ವರಯ್ಯನವರ ಆಶಯದಂತೆ ಹುಟ್ಟೂರಿಗೆ ಆಗಮಿಸಿದ ಡಾ. ಗೋಪಾಲಕೃಷ್ಣ ಪೈಲೂರುರವರು ಸುಮಾರು 60 ದಶಕಗಳಿಗೂ ಹೆಚ್ಚು ಕಾಲ ಕುಕ್ಕುಜಡ್ಕದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮೃತರು ಪುತ್ರ ಕಾಂಞಂಗಾಡಿನ ಪೆರಿಯಾ ಯೋಗ ವಿಶ್ವವಿದ್ಯಾಲಯದಲ್ಲಿ ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಸುಬ್ರಹ್ಮಣ್ಯ, ಪುತ್ರಿಯರಾದ ಶ್ರೀಮತಿ ಸಾವಿತ್ರಿ, ಶ್ರೀಮತಿ ವೀಣಾ, ಶ್ರೀಮತಿ ವಿದ್ಯಾ, ಸೊಸೆ ಡಾ. ಸಂಧ್ಯಾ ಸೇರಿದಂತೆ ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ ಇಂದು ಮಧ್ಯಾಹ್ನ 11.30ಕ್ಕೆ ಮೃತರ ಸ್ವಗೃಹದಲ್ಲಿ ನಡೆಯಲಿದೆ.