ಹರಿಹರಪಲ್ಲತಡ್ಕ ಶ್ರೀ ಹರಿಹರೇಶ್ವರ ದೇವಸ್ಥಾನಕ್ಕೆ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕಳ ಭೇಟಿ

0

ಹರಿಹರ ಪಲ್ಲತಡ್ಕದಲ್ಲಿರುವ ಶ್ರೀ ಹರಿಹರೇಶ್ವರ ದೇವಸ್ಥಾನಕ್ಕೆ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕಳರವರು ಇತ್ತೀಚೆಗೆ ಭೇಟಿ ನೀಡಿದರು.

ಅವರನ್ನು ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಕಿಶೋರ್ ಕುಮಾರ್ ಕೂಜುಗೋಡು ಮತ್ತು ಅವರ ಪತ್ನಿ ಬರಮಾಡಿಕೊಂಡು ಶಾಲು ಹೊದಿಸಿ ಗೌರವಿಸಿದರು.

ದೇವಸ್ಥಾನದ ಅರ್ಚಕ ಸುಬ್ರಮಣ್ಯ ಭಟ್ ರವರು ಶ್ರೀ ದೇವರ ಮಹಾ ಪ್ರಸಾದವನ್ನು ನೀಡಿದರು.

ಈ ಸಂದರ್ಭದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಾಸ್ಟರ್ ಪ್ಲಾನ್ ಸಮಿತಿಯ ಸದಸ್ಯ ಸತೀಶ್ ಕೂಜುಗೋಡು, ಹರಿಹರ ಪಲ್ಲತಡ್ಕ ಕಾಂಗ್ರೆಸ್ ಬೂತ್ ಸಮಿತಿ ಅಧ್ಯಕ್ಷ ಬೆಳ್ಯಪ್ಪ ಗೌಡ ಖಂಡಿಗೆ, ಶ್ರೀಮತಿ ಸಾಯಿಗೀತಾ ಕೂಜುಗೋಡು ಕಲ್ಲೇ ಮಠ ಸೇರಿದಂತೆ ಮತ್ತಿತರು ಉಪಸ್ಥಿತಿ ಇದ್ದರು.

ವರದಿ : ಡಿ.ಹೆಚ್