ಸುಳ್ಯ ಗಾಂಧಿನಗರದ ನಾವೂರು ನಿವಾಸಿ ದಿ.ಗೋಪಾಲ ಆಚಾರ್ಯ ರವರ ಪುತ್ರ ಎ.ಮಂಜು ರವರು ಅಸೌಖ್ಯದಿಂದ ಸುಳ್ಯ ಖಾಸಗಿ ಆಸ್ಪತ್ರೆಯಲ್ಲಿ ಡಿ.2 ರಂದು ನಿಧನರಾದರು. ಅವರಿಗೆ 40 ವರ್ಷ ವಯಸ್ಸಾಗಿತ್ತು.
ನಿನ್ನೆ ಸಂಜೆ ಮನೆಯಲ್ಲಿರುವ ಸಂದರ್ಭದಲ್ಲಿ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಸುಳ್ಯ ಕೆ.ವಿ.ಜಿ.ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚಿಕಿತ್ಸೆಗೆ ಸ್ಪಂದಿಸದೆ ಯುವಕ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಮೃತ ಪಟ್ಟರೆಂದು ತಿಳಿದು ಬಂದಿದೆ.
ಮೃತ ಯುವಕ ಅವಿವಾಹಿತರಾಗಿದ್ದು ಕೂಲಿ ಕೆಲಸ ಮಾಡಿಕೊಂಡಿದ್ದರು. ಮೃತರು ತಾಯಿ ಶ್ರೀಮತಿ ಜಾನಕಿ, ಸಹೋದರರಾದ ಮಹೇಶ್ ನಾವೂರು, ಮನೋಜ್ ನಾವೂರು, ಪುತ್ರಿ ಶಶಿಕಲಾ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.