ಸುಳ್ಯ ತಾಲೂಕು ನವೋದಯ ಪ್ರೇರಕರ ನವಂಬರ್ ತಿಂಗಳ ಪ್ರಗತಿ ಪರಿಶೀಲನಾ ಸಭೆಯು ಡಿ.5ರಂದು ಸುಳ್ಯ ಸಿ.ಎ. ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.
ಎಸ್.ಸಿ.ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೋಟು ರವರು ಪ್ರಗತಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ನ ಮು ಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀಮತಿ ಪೂರ್ಣಿಮಾ ಶೆಟ್ಟಿ ಮಾಹಿತಿ ನೀಡಿದರು. ಬ್ಯಾಂಕ್ ನ ಎ.ಜಿ.ಎಂ. ಚಂದ್ರಪ್ರಕಾಶ್ ಕಂಬಳ, ಜಿಲ್ಲಾ ಮೇಲ್ವಿಚಾರಕರಾದ ರಂಜಿತ್ ಕುಮಾರ್ ತಾಲೂಕು ಮೇಲ್ವಿಚಾರಕರಾದ ಶ್ರೀಧರ್ ಮಾಣಿಮರ್ದು ಹಾಗೂ ಎಲ್ಲಾ ಪ್ರೇರಕರು ಉಪಸ್ಥಿತರಿದ್ದರು.