ಜಾಲ್ಸೂರು ಗ್ರಾಮದ ವರಲಕ್ಷ್ಮಿ ಸ್ತ್ರೀಶಕ್ತಿ ಶಕ್ತಿ ಗೊಂಚಲ ಸಮಿತಿಯ ಮಹಾಸಭೆಯು ಜಾಲ್ಸೂರು ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಸ್ತ್ರೀಶಕ್ತಿ ಶಕ್ತಿ ಗೊಂಚಲು ಸಮಿತಿಯ ಅಧ್ಯಕ್ಷೆ ಶ್ರೀಮತಿ ಶೋಭಿತಾ ಪ್ರಭಾಕರ್ ಸೋಣ೦ಗೇರಿ ಇವರು ಸಭಾಧ್ಯಕ್ಷತೆಯನ್ನು ವಹಿಸಿದ್ದರು.
ವೇದಿಕೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಶೈಲಜಾ ಉಪಸ್ಥಿತರಿದ್ದರು.
ವಲಯ ಮೇಲ್ವಿಚಾರಕಿಯವರಾದ ಶ್ರೀಮತಿ ಉಷಾ ಎಂ., ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಶ್ರೀಮತಿ ತಿರುಮಲೇಶ್ವರಿ ಎ .ಎಲ್,
ಸದಸ್ಯರಾದ ಶ್ರೀಮತಿ ಗೀತಾ ಗೋಪಿನಾಥ್, ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ವೇದಾ ಶೆಟ್ಟಿ, ಸ್ತ್ರೀಶಕ್ತಿ ಶಕ್ತಿ ಬ್ಲಾಕ್ ಸೊಸೈಟಿ ಪ್ರತಿನಿಧಿ ಶ್ರೀಮತಿ ಸುಮಾ ರೈ, ಗ್ರಾಮ ಪಂಚಾಯಿತ್ ಮಾಜಿ ಉಪಾಧ್ಯಕ್ಷರಾದ ಶ್ರೀಮತಿ ರಾಧಿಕಾ ಮತ್ತು ಗೊಂಚಲು ಸಮಿತಿಯ ಕಾರ್ಯದರ್ಶಿ ಶ್ರೀಮತಿ ಸುಮಂಗಲಿ ಇವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸ್ತಿçÃಶಕ್ತಿ ಸಂಘಗಳ ಸದಸ್ಯರುಗಳಿಗೆ ಲಕ್ಕಿ ಗೇಮ್ ಹಾಗೂ ಜಾನಪದ ಗೀತೆ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಅತಿಥಿಗಳಾಗಿ ಹಾಜರಿದ್ದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಶೈಲಜಾ ರವರು ಸ್ತಿçÃಶಕ್ತಿ ಸಂಘಗಳ ಬಗ್ಗೆ ಮತ್ತು ಸರಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಮೇಲ್ವಿಚಾರಕಿಯವರಾದ ಉಷಾ ರವರು ಸಂಘಗಳನ್ನು ನಡೆಸುವ ಬಗ್ಗೆ ಹಾಗೂ ಅಂಗನವಾಡಿ ಕಾರ್ಯಕರ್ತರು ನೀಡುವ ಮಾತೃ ವಂದನ, ಗೃಹಲಕ್ಷ್ಮಿ, ಭಾಗ್ಯಲಕ್ಷ್ಮಿ, ಸೇವೆಗಳ ಬಗ್ಗೆ ವಿವರಿಸಿದರು.
ಬಳಿಕ ೨೦೨೪ನೇ ಅಕ್ಟೋಬರ್ ೩೦ರಂದು ನಿವೃತ್ತಿ ಹೊಂದಿರುª ಅಡ್ಕಾರು ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಶ್ರೀಮತಿ ಪ್ರೇಮಲತಾ ಎನ್, ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆದ
ಶ್ರೀಮತಿ ತಿಲಕ ಬೊಳುಬೈಲು ಹಾಗೂ ಜಾಲ್ಸೂರು ಗ್ರಾಮದ ಎಲ್ಲಾ ಅಂಗನವಾಡಿ ಕಾರ್ಯಕರ್ತೆರನ್ನು, ಆಶಾ ಕಾರ್ಯಕರ್ತೆರಾದ ಶ್ರೀಮತಿ ಸರಸ್ವತಿ ಯಂ. ಇವರನ್ನು ಗೊಂಚಲಿನ ವತಿಯಿಂದ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಹಾಜರಿದ್ದ ಎಲ್ಲಾ ಅತಿಥಿಗಳು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಶ್ರೀ ಶಕ್ತಿ ಗೊಂಚಲಿನ ಪದಾಧಿಕಾರಿಗಳು, ಪ್ರತಿನಿಧಿಗಳು ಸದಸ್ಯರುಗಳು ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಶ್ರೀಮತಿ ಹರಿಣಾಕ್ಷಿ ಮರಸಂಕ ಪ್ರಾರ್ಥಿಸಿ, ಶ್ರೀಮತಿ ಸುಮಂಗಲಿ ನಾಯಕ್ ಇವರು ಸ್ವಾಗತಿಸಿ, ಶ್ರೀಮತಿ ಜಯಶ್ರೀ ವಂದನಾರ್ಪಣೆಗೈದರು.
ಕೊನಡ್ಕ ಪದವು ಅಂಗನವಾಡಿ ಕಾರ್ಯಕರ್ತೆ ನಿವೇದಿತಾ ಬಿ. ಕಾರ್ಯಕ್ರಮ ನಿರೂಪಿಸಿದರು.
ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.