ಸುಳ್ಯ :ಜಮೀಯ್ಯತ್ತುಲ್ ಫಲಾಹ್ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ಆರೋಗ್ಯ ಮಾಹಿತಿ ಶಿಬಿರ

0

50 ಕ್ಕೂ ಹೆಚ್ಚು ಪದವಿ ಹಾಗೂ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ

ಕಳೆದ ಮೂರುವರೆ ದಶಕಗಳಿಂದ ಸಾಮಾಜ ಸೇವಾ ವಿಭಾಗದಲ್ಲಿ ಗುರುತಿಸಿಕ್ಕೊಂಡು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗೊಂಡಿರುವ ದ ಕ ಜಿಲ್ಲಾ ಮತ್ತು ಉಡುಪಿ ಜಮೀಯ್ಯತುಲ್ ಫಲಾಹ್ ಸಂಸ್ಥೆಯ ಸುಳ್ಯ ಘಟಕ ವತಿಯಿಂದ ಪ್ರತಿಭಾ ಪುರಸ್ಕಾರ,ವಿದ್ಯಾರ್ಥಿ ವೇತನ ವಿತರಣೆ ಹಾಗೂ ಅರೋಗ್ಯ ಮಾಹಿತಿ ಶಿಬಿರ ಡಿ 7 ರಂದು ಗಾಂಧಿನಗರ ಮದರಸ ಸಭಾಂಗಣದಲ್ಲಿ ನಡೆಯಿತು.

ಜಮೀಯ್ಯತ್ತುಲ್ ಫಲಾಹ್ ಉಡುಪಿ & ದ.ಕ.ಜಿಲ್ಲಾ ಸಮಿತಿ ಕೋಶಾಧಿಕಾರಿ ಕೆ ಎಂ ಅಬೂಬಕ್ಕರ್ ಸಿದ್ದೀಕ್ ಕಾರ್ಯಕ್ರಮವನ್ನು ಉದ್ಘಾಟಿಸಿ ಸಂಸ್ಥೆಯು ಕಳೆದ 38 ವರ್ಷಗಳಿಂದ ನಡೆದು ಬಂದ ಹಾದಿ ಮತ್ತು ಶಿಕ್ಷಣಕ್ಕೆ ನೀಡುತ್ತಿರುವ ಪ್ರೋತ್ಸಾಹದ ಕುರಿತು ಮಾತನಾಡಿದರು.
ಕಾರ್ಯಕ್ರಮದ

ಅಧ್ಯಕ್ಷತೆಯನ್ನು ಜಮೀಯ್ಯತ್ತುಲ್ ಫಲಾಹ್ ಸುಳ್ಯ ತಾಲೂಕು ಘಟಕದ ಅಧ್ಯಕ್ಷ ಕೆ ಎಂ ಅಬೂಬಕ್ಕರ್ ಪಾರೆಕಲ್ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸುಳ್ಯ ತಾಲೂಕು ಆಸ್ಪತ್ರೆಯ ವೈದ್ಯರಾದ ಡಾ.ಭವ್ಯ ರವರು ಅರೋಗ್ಯದ ಬಗ್ಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಸುಳ್ಯ ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯ ಕೆ ಎ ಇಲ್ಯಾಸ್ ಅಹ್ಮದ್, ಫಾರ್ಮೆಡ್ ಗ್ರೂಪ್ ಬೆಂಗಳೂರು ಇದರ ಉಪಾಧ್ಯಕ್ಷ ಡಾ। ಉಮ್ಮರ್ ಬೀಜದಕಟ್ಟೆ,ದ. ಕ ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟದ ಉಪಾಧ್ಯಕ್ಷ ಹಸೈನಾರ್ ಜಯನಗರ,ಸಮಿತಿಯ ಹಿರಿಯ ಸದಸ್ಯ ಅಶ್ರಫ್ ಗುಂಡಿ, ಹಿರಿಯರಾದ ಅಬ್ದುಲ್ಲಾ ಮಾಸ್ಟರ್ ಅರಂತೋಡು ರವರು ಮಾತನಾಡಿ ಸಂಸ್ಥೆಯ ಸಾಮಾಜಿಕ ಚಿಂತನೆ ಹಾಗೂ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವಿಷಯದಲ್ಲಿ ಸಂಸ್ಥೆ ನೀಡುವ ಪ್ರೋತ್ಸಾಹದ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿದರು.

ವೇದಿಕೆಯಲ್ಲಿ ಗಾಂಧಿನಗರ ಜುಮ್ಮಾ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಹಾಜಿ ಕೆ ಎಂ ಎಸ್ ಮಹಮ್ಮದ್,ಅನ್ಸಾರುಲ್ ಮುಸ್ಲಿಮೀನ್ ಅಶೋಸಿಯೆಷನ್ ಅಧ್ಯಕ್ಷ ಹಾಜಿ ಅಬ್ದುಲ್ಲ ಕಟ್ಟೆಕ್ಕಾರ್ಸ್,ದ ಕ ಜಿಲ್ಲಾ ಹಾಗೂ ಉಡುಪಿ ಜಿಲ್ಲಾ ಮೀಫ್ ಉಪಾಧ್ಯಕ್ಷ ಹಾಜಿ ಕೆ ಎಂ ಮುಸ್ತಫಾ ಜನತಾ, ಮುಖಂಡರುಗಳಾದ ಕೆ ಬಿ ಇಬ್ರಾಹಿಂ,ಎಸ್ ಪಿ ಅಬೂಬಕ್ಕರ್,ಹಾಜಿ ಇಬ್ರಾಹಿಂ ಕತ್ತರ್ ಮಂಡೆಕ್ಕೋಲು,ಸಮಿತಿಯ ಉಪಾಧ್ಯಕ್ಷರುಗಳಾದ ಶಾಫಿ ಕುತ್ತಮೊಟ್ಟೆ,ನ್ಯಾಯವಾದಿ ಪವಾಜ್ ಕನಕ ಮಜಲು,ಕೋಶಾಧಿಕಾರಿ ನ್ಯಾಯವಾದಿ ಅಬೂಬಕ್ಕರ್ ಜೆ ಎನ್ ಅಡ್ಕಾರ್, ಪದಾಧಿಕಾರಿಗಗಳಾದ ಹಾಜಿ ಕೆ.ಎಂ. ಮುಹಿಯ್ಯುದ್ದೀನ್ ಫ್ಯಾನ್ಸಿ, ಅಮೀರ್ ಕುಕ್ಕುಂಬಳ್ಳ, ಹಸೈನಾರ್ ಹಾಜಿ ಗೋರಡ್ಕ, ಹಸೈನಾ‌ರ್ ವಳಲಂಬೆ,ಅಬ್ದುಲ್ ರಝಾಕ್ ಎಣ್ಣೂರು,ಇಬ್ರಾಹಿಂ ನೀರಬಿದಿರೆ, ರಿಯಾಝ್ ಕಟ್ಟೆಕ್ಕಾರ್ಸ್ ಸುಳ್ಯ,ಎಸ್.ಇ. ಝುಬೈರ್ ಅರಂತೋಡು
ಡಾ| ಮಹಮ್ಮದ್ ಕುಂಞ ಕುಂಭಕ್ಕೋಡು,
ಸಿ.ಹೆಚ್. ಅಬ್ದುಲ್ ಖಾದರ್ ಕಲ್ಲುಗುಂಡಿ,ಅಬೂಬಕ್ಕರ್ ಸಿದ್ದೀಕ್ ಕಟ್ಟೆಕ್ಕಾರ್,ಅಬ್ದುಲ್ ಖಾದರ್ ಪಟೇಲ್ ಮೊದಲಾದವರು ಉಪಸ್ಥಿತರಿದ್ದರು.