ಸುಳ್ಯದಲ್ಲಿ ಡಿಸೆಂಬರ್ 15ರಂದು ಅರೆಭಾಷೆ ದಿನಾಚರಣೆ

0

ಕರ್ನಾಟಕ ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿ ಮಡಿಕೇರಿ ಮತ್ತು ಗೌಡರ ಯುವ ಸೇವಾ ಸಂಘ, ಸುಳ್ಯ ತಾಲೂಕು ಗೌಡ ಮಹಿಳಾ ಘಟಕ ಮತ್ತು ಗೌಡ ತರುಣ ಘಟಕ ಹಾಗೂ ಸುಳ್ಯ ನಗರ ಸಮಿತಿ ಮತ್ತು ಮಹಿಳಾ ಸಮಿತಿಯ ಜಂಟಿ ಆಶ್ರಯದಲ್ಲಿ ಡಿಸೆಂಬರ್ 15ರ ಆದಿತ್ಯವಾರದಂದು ಗೌಡ ಸಮುದಾಯ ಭವನ ಕೊಡಿಯಾಲಬೈಲುವಿನಲ್ಲಿ ಅರೆಭಾಷೆ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಮತ್ತು ಗೌಡ ಯುವ ಸೇವಾ ಸಂಘದ – ಅಧ್ಯಕ್ಷರಾದ ಪಿ.ಎಸ್.ಗಂಗಾಧರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.

ಪೂರ್ವಾಹ್ನ ಗಂಟೆ 9.30ಕ್ಕೆ ಸುಳ್ಯದ ನಿವೃತ್ತ ಅರಣ್ಯ ಪಾಲಕರಾದ ಅಮೈ ಸುಂದರ ಗೌಡರವರು ಚಾಲನೆ ನೀಡಲಿದ್ದಾರೆ. ಆ ಬಳಿಕ ಅರೆಭಾಷೆ ಹಾಡು, ವಿವಿಧ ತಂಡಗಳಿಂದ ನೃತ್ಯ, ಪಳ್ಮೆ, ರೂಪಕಗಳ ಪ್ರದರ್ಶನ, ನಗೆ ಹಾಸ್ಯಗಳು ಮೂಡಿಬರಲಿದೆ.

ಮಧ್ಯಾಹ್ನ ದಿನಾಚರಣೆಯ ಉದ್ಘಾಟನಾ ಸಮಾರಂಭವನ್ನು ಸುಳ್ಯದ ಹಿರಿಯ ಇಂಜಿನಿಯರ್ ಡಿ.ಎಂ.ಸುಮಿತ್ರರವರು ಉದ್ಘಾಟಿಸಲಿದ್ದಾರೆ. ಸಾಹಿತಿ ಮತ್ತು ಸುಳ್ಯದ ಶಿಶು ಅಭಿವೃದ್ಧಿ ಅಧಿಕಾರಿ ಶ್ರೀಮತಿ ಶೈಲಜಾ ದಿನೇಶ್‌ರವರು ಅರೆಭಾಷೆ ದಿನಾಚರಣೆ ಮಹತ್ವದ ಬಗ್ಗೆ ದಿಕ್ಸೂಚಿ ಮಾತನಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಅರೆಭಾಷೆ ಬೆಳವಣಿಗೆ ಹಾಗೂ ವಿಸ್ತಾರದಲ್ಲಿ ಕೊಡುಗೆ ನೀಡುತ್ತಿರುವ ಸುಳ್ಯದ ಅಬ್ದುಲ್ ಕಟ್ಟಿಕಾರ್ಸ್, ಹರೀಶ್ ಬಂಟ್ವಾಳ, ಕೆ.ಆರ್.ಗೋಪಾಲಕೃಷ್ಣ, ಸಾವಿತ್ರಿ ಕಣೆಮರಡ್ಕ, ಜಯರಾಮ ಅಜಿಲ, ಉದಯಭಾಸ್ಕರ್ ರವರುಗಳನ್ನು ಗೌರವಿಸಿ ಅಭಿನಂದಿಸಲಾಗುವುದು. ಸುಳ್ಯ ಗೌಡ ಯುವ ಸೇವಾ ಸಂಘದ ಪೂರ್ವಾಧ್ಯಕ್ಷರಾದ ಕೆ.ಸಿ. ಸದಾನಂದ, ಮೋಹನ್ ರಾಂ ಸುಳ್ಳಿ ಗೌರವ ಉಪಸ್ಥಿತಿಯಲ್ಲಿರುವರು. ದಿನಾಚರಣೆಯಲ್ಲಿ ತಾಲೂಕಿನಾದ್ಯಂತ ಭಾಗವಹಿಸುವ ತಂಡಗಳು, ಅರೆಭಾಷೆಯಲ್ಲಿ ಯಾವುದೇ ಕಾರ್ಯಕ್ರಮದ ಪ್ರದರ್ಶನ ನೀಡಬಹುದು. ತಂಡಗಳಿಗೆ ಗೌರವಧನ ನೀಡಲಿದ್ದು, ಈ ಬಗ್ಗೆ ಸಾಂಸ್ಕೃತಿಕ ಸಂಚಾಲಕಿ ಚಂದ್ರಮತಿ ಕೆ (9481507515) ಹಾಗೂ ಅಕಾಡೆಮಿ ಸದಸ್ಯೆ ಲತಾ ಕುದ್ಪಾಜೆ (9482744435) ಸಂಪರ್ಕಿಸಬಹುದು. ತಂಡಗಳಿಗೆ ಗೌರವಧನ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು ಎಂದೂ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ