ಕಳೆದ ಹತ್ತು ವರ್ಷಗಳಿಂದ ದ.ಕ ಜಿಲ್ಲಾ ಗ್ರಹ ರಕ್ಷಕ ದಳದಲ್ಲಿ ಡಾ. ಮುರಲೀಮೋಹನ್ ಚೂಂತಾರುರವರು ನೀಡಿದ ನಿಷ್ಕಾಮ, ನಿಷ್ಕಳಂಕ ಮತ್ತು ಪ್ರಾಮಾಣಿಕ ಸೇವೆಗಾಗಿ ಭಾರತ ಸರ್ಕಾರದ ಗೃಹ ಸಚಿವಾಲಯ, ನವದೆಹಲಿ ಇವರಿಂದ ನೀಡಲ್ಪಟ್ಟ ಡಿಜಿ ಡಿಸ್ಕ್ ಪುರಸ್ಕಾರ ಲಭಿಸಿದೆ.
ಡಿ. 6ರಂದು ಬೆಂಗಳೂರಿನ ಪೋಲಿಸ್ ಮಹಾನಿರ್ದೇಶಕರ ಕಚೇರಿಯಲ್ಲಿ ನಡೆದ ಗೃಹರಕ್ಷಕ ದಳದ 62ನೇ ಉತ್ತಾನ ದಿನಾಚರಣೆಯಂದು ಪೋಲಿಸ್ ಮಹಾನಿರ್ದೇಶಕರು ಹಾಗೂ ಗೃಹರಕ್ಷಕದಳ ಮಹಾ ಸಮಾದೇಷ್ಠರಾದ ಪ್ರಶಾಂತ್ ಕುಮಾರ್ ಸಿಂಗ್ ಠಾಕೂರ್ (ಐ.ಪಿ.ಎಸ್) ದ.ಕ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ. ಮುರಲೀ ಮೋಹನ್ ಚೂಂತಾರುರವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಗೃಹರಕ್ಷಕದಳದ ಉಪ ಮಹಾ ಸಮಾದೇಷ್ಠರಾದ ಅಕ್ಷಯ್.ಎಂ. ಹಾಕೆ
(ಐ.ಪಿ.ಎಸ್.), ಗೃಹರಕ್ಷಕದಳ ಅಪರ ಮಹಾ ಸಮಾದೇಷ್ಟರಾದ ನಂಜುಂಡ ಸ್ವಾಮಿ (ಐ ಪಿ ಎಸ್) ಹಾಗೂ ಇತರ ಉನ್ನತ ಹಿರಿಯ ಅಧಿಕಾರಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.