ಮಾಜಿ ಮುಖ್ಯಮಂತ್ರಿ ದಿ.ಎಸ್.ಎಂ.ಕೃಷ್ಣ ರವರಿಗೆ ನಾಳೆ (ಡಿ.11ರಂದು) ಸುಳ್ಯದಲ್ಲಿ ಗೌಡ ಸಂಘದಿಂದ ಶ್ರದ್ಧಾಂಜಲಿ ಸಭೆ

0

ರಾಜ್ಯದ ಮುಖ್ಯಮಂತ್ರಿಯಾಗಿ, ಅಲ್ಲದೆ ವಿವಿಧ ಉನ್ನತ ಹುದ್ದೆಗಳಲ್ಲಿದ್ದುಕೊಂಡು ನಾಡಿಗೆ ಅತ್ಯುತ್ತಮ ಸೇವೆ ಸಲ್ಲಿಸಿದ ಮಾಜಿ ಮುಖ್ಯಮಂತ್ರಿ ಒಕ್ಕಲಿಗ ನಾಯಕ ಎಸ್.ಎಂ. ಕೃಷ್ಣ ರವರ ನಿಧನಕ್ಕೆ ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘ ಮತ್ತು ಗೌಡರ ಯುವ ಸೇವಾ ಸಂಘದ ವತಿಯಿಂದ ನಾಳೆ ಪೂ. ಗಂಟೆ 11.00ಕ್ಕೆ ಸುಳ್ಯ ಶ್ರೀ ವೆಂಕಟರಮಣ ಟವರ್‌ನ ಮದುವೆಗದ್ದೆ ಭೋಜಪ್ಪ ಗೌಡ ಸಭಾಭವನದಲ್ಲಿ ಶ್ರದ್ಧಾಂಜಲಿ ಸಭೆ ನಡೆಯಲಿದೆ ಎಂದೂ ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ದಿನೇಶ್ ಮಡಪ್ಪಾಡಿ ಮತ್ತು ಗೌಡರ ಯುವ ಸೇವಾ ಸಂಘ ಸುಳ್ಯ ತಾಲೂಕು ಇದರ ಅಧ್ಯಕ್ಷ ಪಿ.ಎಸ್. ಗಂಗಾಧರ ಪತ್ರಿಕೆ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.