ಸುಳ್ಯ ತಾಲೂಕು ಪಿಂಚಣಿದಾರರ ಮತ್ತು ನಿವೃತ್ತ ನೌಕರರ ಸಂಘ ಇದರ ವತಿಯಿಂದ ಪಿಂಚಣಿದಾರರ ದಿನಾಚರಣೆ ಮತ್ತು ಹಿರಿಯ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ಡಿ.17ರಂದು ಪೂ.10.30ಕ್ಕೆ ಸಂಘದ ಸಂಧ್ಯಾರಶ್ಮಿ ಸಭಾಂಗಣದಲ್ಲಿ ನಡೆಯಲಿದೆ.
ಸಂಘದ ಅಧ್ಯಕ್ಷರಾದ ಡಾ.ಎಸ್.ರಂಗಯ್ಯ ರವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲಾ ಪಿಂಚಣಿದಾರರು ಮತ್ತು ನಿವೃತ್ತ ನೌಕರರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ವಿನಂತಿಸಿದ್ದಾರೆ.