ಮಾರ್ಚ್ 23: ನಾಗಶ್ರೀ ಪ್ರೆಂಡ್ಸ್ ಸುಳ್ಯ ವತಿಯಿಂದ ರಾಜ್ಯಮಟ್ಟದ ಮುಕ್ತ ಕ್ರೀಡಾಕೂಟ

0

ಅರಿಕೋಡಿ ಶ್ರೀ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಕರಪತ್ರ ಬಿಡುಗಡೆ

ನಾಗಶ್ರೀ ಪ್ರೆಂಡ್ಸ್ ಸುಳ್ಯ ವತಿಯಿಂದ ರಾಜ್ಯಮಟ್ಟದ ಮಹಿಳೆಯರ ಮುಕ್ತ ಹಾಗೂ ಪುರುಷರ (525ಕೆ.ಜಿ.) ಲೆವೆಲ್ ಮಾದರಿಯ ಹಗ್ಗಜಗ್ಗಾಟ ಹಾಗೂ ತ್ರೋಬಾಲ್ ಪಂದ್ಯಾಟದ ಮಾ.23 ರಂದು ನಡೆಯಲಿದೆ.

ಈ ಪ್ರಯುಕ್ತ ಕಾರ್ಯಕ್ರಮದ ಕರಪತ್ರವನ್ನು ಅರಿಕೋಡಿ ಚಾಮುಂಡೇಶ್ವರಿ ದೇವರ ಸನ್ನಿಧಾನದಲ್ಲಿ ಧರ್ಮದರ್ಶಿಗಳಾದ ಹರೀಶ್‌ರವರು ನ.23ರಂದು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ತಂಡದ ಅಧ್ಯಕ್ಷೆ ತಿಲಕ ನವೀನ್ ಆರ್ತಾಜೆ ಹಾಗೂ ತಂಡದ ಸದಸ್ಯರು ಉಪಸ್ಥಿತರಿದ್ದರು.