ಸುಳ್ಯ ತಾಲೂಕು ಕಬಡ್ಡಿ ಅಸೋಸಿಯೇಷನ್ ವತಿಯಿಂದ ಸುಳ್ಯ ತಾಲೂಕಿನಲ್ಲಿ ಭಾಗವಹಿಸುವ ಕ್ರೀಡಾ ಸಂಘಗಳ ಹಾಗೂ ತೀರ್ಪುಗಾರರ ಸಭೆಯು ಯುವಜನ ಸಯುಕ್ತ ಮಂಡಳಿ ಸುಳ್ಯದ ಸಭಾಂಗಣದಲ್ಲಿ ಸುಳ್ಯ ತಾಲೂಕು ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಬಿ.ಕೆ ಮಾಧವ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ವಿವಿಧ ಕ್ರೀಡಾ ಸಂಘದ ಪದಾಧಿಕಾರಿಗಳು ಹಾಗೂ ತೀರ್ಪುಗಾರರು ಭಾಗವಹಿಸಿದ್ದರು. ಅಸೋಸಿಯೇಷನ್ ಅಧ್ಯಕ್ಷ ಬಿ.ಕೆ ಮಾಧವರು ಮಾತನಾಡಿ, “ಸುಳ್ಯ ತಾಲೂಕಿನಲ್ಲಿ ಹಮ್ಮಿಕೊಳ್ಳುವ ಕಬಡ್ಡಿ ಪಂದ್ಯಾಟದ ಸಂಘಟಕರು, ತಾಲೂಕು ಅಸೋಶಿಯೇಶನ್ ನಿಂದ ಕಡ್ಡಾಯವಾಗಿ ಅನುಮತಿ ಪಡೆಯುವುದು ಮತ್ತು ಸುಳ್ಯ ತಾಲೂಕಿನ ವಿವಿಧ ಕ್ರೀಡಾ ಸಂಘಗಳು ಸುಳ್ಯ ತಾಲೂಕು ಕಬಡ್ಡಿ ಅಸೋಸಿಯೇಷನ್ ನಲ್ಲಿ ನೊಂದಣಿ ಮಾಡಿಕೊಳ್ಳುವುದು ಹಾಗೂ ತೀರ್ಪುಗಾರರು ಸುಳ್ಯ ತಾಲೂಕು ಕಬಡ್ಡಿ ಅಸೋಸಿಯೇಷನ್ ತೀರ್ಪುಗಾರರ ಮಂಡಳಿಯಲ್ಲಿ ಸದಸ್ಯರಾದವರು ಮಾತ್ರ ತೀರ್ಪುಗಾರರಾಗಿ ಭಾಗವಹಿಸುವುದು ಎಂದು ಸಭೆಯಲ್ಲಿ ಆದ ನಿರ್ಣಯವನ್ನು ಎಲ್ಲರೂ ಪಾಲಿಸುವುದು ಎಂದು ಹೇಳಿದರು.
ವೇದಿಕೆಯಲ್ಲಿ ಸುಳ್ಯ ತಾಲೂಕು ತೀರ್ಪುಗಾರರ ಮಂಡಳಿಯ ಅಧ್ಯಕ್ಷ ಮಾಯಿಲಪ್ಪ ಕೊಂಬೆಟ್ಟು, ಸಂಚಾಲಕರಾದ ನಿತಿನ್ ಮಜಿಕೋಡಿ ಉಪಸ್ಥಿತರಿದ್ದರು.
ಕಬಡ್ಡಿ ಅಸೋಸಿಯೇಷನ್ ನ ಕಾರ್ಯದರ್ಶಿ ಉಮೇಶ್ ಪಂಜದಬೈಲು ಸ್ವಾಗತಿಸಿ, ಕೋಶಾಧಿಕಾರಿ ಕೊರಗಪ್ಪ ಬೆಳ್ಳಾರೆ ವಂದಿಸಿದರು.
ಸಭೆಯಲ್ಲಿ ದೊಡ್ಡಣ್ಣ ಬರೆಮೇಲು, ಎ.ಸಿ ವಸಂತ, ಹರಿಪ್ರಕಾಶ್ ಅಡ್ಕಾರ್, ಸಂದೀಪ್ ಪಲ್ಲೋಡಿ, ಶ್ರೀಮತಿ ವನಿತಾ, ಮಂಜುನಾಥ ಪಡ್ಪಿನಂಗಡಿ, ವೀರನಾಥ್ ಬೆಳ್ಳಾರೆ, ದಾಮೋದರ ನೇರಳ, ಅಬ್ದುಲ್ ಮಜೀದ್, ರಂಗನಾಥ್ ನಾಗಪಟ್ಟಣ, ವಿಜೇತ್ ಹಿರಿಯಡ್ಕ, ವಿಶ್ವನಾಥ ಕೆವಿಜಿ ಇವರುಗಳು ಸಭೆಯಲ್ಲಿ ಉಪಸ್ಥಿತರಿದ್ದರು.