ಸುಳ್ಯ ಸೈಂಟ್ ಜೋಸೆಫ್ ಶಾಲೆಯ ಅಶ್ವಿಜ್ ಆತ್ರೇಯ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

0

ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ಪ್ರತಿಭಾ ಕಾರಂಜಿ ಸ್ಪರ್ಧೆಯು ಬೆಳ್ತಂಗಡಿ ಹೋಲಿ ರೆಡಿವೇರ್ ವಿದ್ಯಾಸಂಸ್ಥೆಯಲ್ಲಿ ನಡೆದಿದ್ದು ಜಿಲ್ಲಾಮಟ್ಟದ ಪ್ರತಿಭಾಕಾರಂಜಿ
ಸ್ಪರ್ಧೆಯಲ್ಲಿ ಹಿರಿಯರ ವಿಭಾಗದ ಮಿಮಿಕ್ರಿ ಸ್ಪರ್ಧೆಯಲ್ಲಿ ಸಂತ ಜೋಸೆಪ್ ಹಿರಿಯ ಪ್ರಾಥಮಿಕ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿ ಅಶ್ವಿಜ್ ಆತ್ರೇಯ ಸುಳ್ಯ ಇವರು ಪ್ರಥಮ ಸ್ಥಾನ ಪಡೆಯುವ ಮೂಲಕ ಸುಳ್ಯವನ್ನು ಜಿಲ್ಲಾ ಮಟ್ಟದಲ್ಲಿ ಗುರುತಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಮತ್ತು ದೇಶಭಕ್ತಿ ಗೀತೆಯಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.


ಇವರನ್ನು ಶಾಲಾ ಸಂಚಾಲಕರಾದ ಫಾದರ್ ವಿಕ್ಟರ್ ಡಿ ಸೋಜಾ ಮುಖ್ಯೋಪಾಧ್ಯಾಯಿನಿ ಮೇರಿ ಸ್ಟೆಲ್ಲಾ ಹಾಗೂ ಶಿಕ್ಷಕರು ಅಭಿನಂದಿಸಿರುತ್ತಾರೆ.
ಅಧ್ಯಾಪಕಿ
ಶ್ರೀಮತಿ ಹೇಮಾವತಿ ಸಹಕಾರ ನೀಡಿರುತ್ತಾರೆ.


ಇವರು ಸುಳ್ಯದ ನ್ಯೂಸ್ ಪೇಪರ್ ಏಜನ್ಸಿಯಾದ ಪ್ರಭು ಬುಕ್ ಸೆಂಟರ್ ನ ಮಾಲಕರಾದ ಶ್ರೀಮತಿ ಉಷಾ ಮತ್ತು ರಾಮಚಂದ್ರ ಜಿ .ಎಸ್ ಇವರ ಸುಪುತ್ರ.
ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಮುಂದಿರುವ ಇವರು ಬಹುಮುಖ ಪ್ರತಿಭೆ ಹೊಂದಿರುವ ಬಾಲಕ
ಗಾಯನ, ನಟನೆ, ಮಾಡೆಲಿಂಗ್, ಯಕ್ಷಗಾನ ಹೀಗೆ ಹಲವಾರು ಕ್ಷೇತ್ರದಲ್ಲಿ ರಾಜ್ಯ ರಾಷ್ಟ್ರಮಟ್ಟದಲ್ಲಿ ಗುರುತಿಸುವತ್ತ ದಾಪುಗಾಲು ಹಾಕುತ್ತಿರುವ ಪುಟ್ಟ ಬಾಲಕ ಧಾರವಾಹಿ ಚಲನಚಿತ್ರ ಮುಖ್ಯ ಪಾತ್ರದಲ್ಲಿ ನಟಿಸಿದ್ದು ಹಲವು ಪ್ರತಿಷ್ಠಿತ ವೇದಿಕೆಗಳಲ್ಲಿ ತನ್ನ ಗಾಯನ ಪ್ರದರ್ಶನ ನೀಡಿ ಸನ್ಮಾನ ಪ್ರಶಸ್ತಿಗಳನ್ನು ಪಡೆದಿರುತ್ತಾರೆ.