ಅಜ್ಜಾವರ ಗ್ರಾಮದ ಮೇನಾಲ ಪ್ರೇಮಚಂದ್ರ ರೈಯವರು ಅಸೌಖ್ಯದಿಂದ ಡಿ.16ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಎರಡು ತಿಂಗಳಿನಿಂದ ಅಸೌಖ್ಯಕ್ಕೊಳಗಾದ ಪ್ರೇಮಚಂದ್ರರು ಸುಳ್ಯದ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಕೆಲ ದಿನಗಳಿಂದ ಆರೋಗ್ಯ ಸಮಸ್ಯೆ ತೀವ್ರಗೊಂಡಾಗ ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಕೊನೆಯುಸಿರೆಳೆದರು.
ಸುಳ್ಯದಲ್ಲಿ ದೀರ್ಘ ಕಾಲ ಆಟೋ ಚಾಲಕರಾಗಿ ಅವರು ಸೇವೆ ಸಲ್ಲಿಸುತ್ತಿದ್ದರು.