ಕನಕಮಜಲು ಸಹಕಾರಿ ಸಂಘದ ಚುನಾವಣೆ

0

ಸಾಮಾನ್ಯ ಸ್ಥಾನದಿಂದ ನಾಲ್ವರು ಬಿಜೆಪಿ ಬೆಂಬಲಿತ ಸಹಕಾರ ಭಾರತಿ , ಓರ್ವ ಬಿಜೆಪಿ ಬಂಡಾಯ ಅಭ್ಯರ್ಥಿಗೆ ಗೆಲುವು

ಕನಕಮಜಲು ಸಹಕಾರಿ ಸಂಘದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಐವರಲ್ಲಿ ನಾಲ್ವರು ಗೆಲುವು ಸಾಧಿಸಿದ್ದು, ಓರ್ವ ಬಿಜೆಪಿ ಬಂಡಾಯ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

ಬಿಜೆಪಿ ಬೆಂಬಲಿತ ಸಹಕಾರ ಭಾರತೀಯ ಅಭ್ಯರ್ಥಿಗಳಾದ ತಿಲೋತ್ತಮ ಕೊಲ್ಲoತಡ್ಕ (377 ಮತ ), ಡಾ. ಗೋಪಾಲಕೃಷ್ಣ ಭಟ್ (362 ಮತ ), ಸುನಿಲ್ ಅಕ್ಕಿಮಲೆ (353 ಮತ), ಕುಸುಮಾಧರ (351 ಮತ), ಬಿಜೆಪಿ ಬಂಡಾಯ ಅಭ್ಯರ್ಥಿ ಗಂಗಾಧರ ಕಾಳಮನೆಯವರು (357 ಮತ) ಪಡೆದು ವಿಜಯಿಯಾಗಿದ್ದಾರೆ.

ಪ್ರತಿಸ್ಪರ್ಧಿಗಳಾಗಿದ್ದ ಬಿಜೆಪಿ ಬೆಂಬಲಿತ ಸಹಕಾರ ಭಾರತೀಯ ಅಭ್ಯರ್ಥಿ ರಘುರಾಮ ಬುಡ್ಲೆಗುತ್ತು (349 ಮತ), ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಅಜಿತ್ ಕಾರಿಂಜ (183 ಮತ ), ಅಬ್ದುಲ್ ಖಾದರ್ ಕದಿಕಡ್ಕ (163 ಮತ ), ಚೆನ್ನಕೇಶವ ಜಾಲ್ಸುರು (119 ಮತ), ವಿಜಯ ನರಿಯೂರು (139 ಮತ ), ಹರಿಪ್ರಕಾಶ್ ಅಡ್ಕಾರು (194 ಮತ), ಬಿಜೆಪಿ ಬಂಡಾಯ ಅಭ್ಯರ್ಥಿ
ಶರತ್ ಅಡ್ಕಾರು (160 ಮತ ) ಪಡೆದು ಸೋಲನ್ನು ಅನುಭವಿಸಿದ್ದಾರೆ.