ಗುತ್ತಿಗಾರು ಗ್ರಾಮದ ಕರುವಜೆಯ ವೇ.ಮೂ. ಕೇಶವ ಜೋಯಿಸ ಅವರು ಡಿ.27, 28,29 ರಂದು ನಡೆಯಲಿರುವ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಈ ಭಾರಿಯ ಹವ್ಯಕ ವೇದರತ್ನ ಪ್ರಶಸ್ತಿ . ಭಾಜನರಾಗಲಿದ್ದಾರೆ.
ಗುತ್ತಿಗಾರು ಗ್ರಾಮದ ಕರುವಜೆ ಶ್ರೀಮತಿ ಲಕ್ಷ್ಮೀ ಮತ್ತು ವೇದಮೂರ್ತಿ ಸುಬ್ರಹ್ಮಣ್ಯ ಜೋಯಿಸರ ಪುತ್ರರಾಗಿರುವ ಕೇಶವ ಜೋಯಿಸ ಅವರು ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಲ್ಲೆ ಪಡೆದರು. 1963 ರಲ್ಲಿ ಪುಟ್ಟಪರ್ತಿ ವೇದ ಸಂಸ್ಥೆಯಲ್ಲಿ ಬಳಿಕ ಶೃಂಗೇರಿಯ ಸಂಜೀವಿನಿ ವೇದ ಸಂಸ್ಕೃತ ಪಾಠ ಶಾಲೆಯಲ್ಲಿ ಉನ್ನತ ಶಿಕ್ಷಣ ಪಡೆದರು. ಬಳಿಕ ಆರಂಭದಲ್ಲಿ ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯ ಇಲ್ಲಿ, ಬಳಿಕ 12 ವರ್ಷಗಳಕಾಲ ಕಾಸರಗೋಡಿನ ವಧೂರು ದೇವಾಲಯದಲ್ಲಿ ವೇದ ಪಾಠಶಾಲಾ ಅಧ್ಯಾಪಕರಾಗಿದ್ದರು. ಬಳಿಕ ಬೆಳ್ಳಾರೆಯಲ್ಲಿ ಆರಂಭವಾದ ಶ್ರೀ ಸದಾಶಿವ ಚಾರಿಟೇಬಲ್ ಟ್ರಸ್ಟ್ ನ ಆಶ್ರಯದಲ್ಲಿ ಆರಂಭವಾದ ಗುರುಕುಲ ಪದ್ದತಿಯ ವೇದ ಪಾಠ ಶಾಲೆಯಲ್ಲಿ ಅಧ್ಯಾಪಕರಾಗಿ ಕೆಲಸ ನಿರ್ವಹಿಸಿದ್ದಾರೆ. ಇವರ ಪತ್ನಿ ಶ್ರೀಮತಿ ವಿಜಯ ಲಕ್ಷ್ಮೀ ಖ್ಯಾತ ನಾಟಿ ವೈದ್ಯೆ, ಪುತ್ರರು ಶಿವ ಸುಬ್ರಹ್ಮಣ್ಯ ಶರ್ಮ, ಶ್ರೀ ಕೃಷ್ಣ ಶರ್ಮ, ಆಂಗೀರಸ ಶಂಕರ ಶರ್ಮ, ಪುತ್ರಿ ಶ್ರೀಮತಿ ಶ್ರೀವಿದ್ಯಾ.