ಬ್ಯಾಂಕೇತರ ಹಣಕಾಸು ವಲಯದಡಿ ಒಂದು ಹೊಸ ಮೈಲುಗಲ್ಲು

0

ಜ.1 ರಂದು ಸುಳ್ಯದಲ್ಲಿ ಡಿ.ಕೆ.ಗ್ರೂಪ್ ಆಫ್ ಕಂಪೆನಿಸ್ ಶುಭಾರಂಭ

ಇಂಡಿಯನ್ ಪಾರ್ಟ್ನರ್ಶಿಪ್ ಆಕ್ಟ್ 1932 ರ ಅಡಿಯಲ್ಲಿ ನೋಂದಾಯಿಸಲಾಗಿರುವ ಡಿ.ಕೆ.ಗ್ರೂಪ್ ಆಫ್ ಕಂಪೆನಿಸ್ ಜ.1 ರಂದು ಬುಧವಾರ ಸುಳ್ಯದ ಶ್ರೀ ಹರಿ ಬಿಲ್ಡಿಂಗ್‌ನಲ್ಲಿ ಶುಭಾರಂಭಗೊಳ್ಳಲಿದೆ.

ಕಾರ್ಯಕ್ರಮದ ಉದ್ಘಾಟಕನೆಯನ್ನು ಸುಳ್ಯ ಶಾಶಕಿ ಕು| ಭಾಗೀರಥಿ ಮುರುಳ್ಯ ನೆರವೇರಿಸಲಿದ್ದಾರೆ. ವ್ಯವಸ್ಥಾಪಕ ಪಾಲುದಾರರು ಹಾಗೂ ಸ್ಥಾಪಕ ಸದಸ್ಯರು ಡಿ.ಕೆ. ಗ್ರೂಪ್ ಆಫ್ ಕಂಪೆನಿಸ್ ಆಲ್ವಿನ್ ಜೋಯಲ್ ನೊರೊನ್ಹಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಎಸ್.ಅಂಗಾರ, ನ.ಪಂ.ಅಧ್ಯಕ್ಷೆ ಶ್ರೀಮತಿ ಶಶಿಕಲಾ ಎ.ನೀರಬಿದಿರೆ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ.ಮಂಗಳೂರು ನಿರ್ದೇಶಕ ಎಸ್.ಎನ್.ಮನ್ಮಥ, ಮಾಜಿ ಸದಸ್ಯರು ದ.ಕ. ಜಿಲ್ಲಾ ಪಂಚಾಯತ್ ಹರೀಶ್ ಕಂಜಿಪಿಲಿ, ಎಂ.ಬಿ. ಫೌಂಡೇಶನ್ ಸುಳ್ಯ ಇದರ ಅಧ್ಯಕ್ಷ ಎಂ.ಬಿ. ಸದಾಶಿವ, ವೆಂಕಟ್ರಮಣ ಕ್ರೆಡಿಟ್ -ಕೋ-ಅಪರೇಟಿವ್ ಸೊಸೈಟಿ ಸುಳ್ಯ ಇದರ ಅಧ್ಯಕ್ಷ ಪಿ.ಸಿ.ಜಯರಾಮ್ , ದ.ಕ.ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು ಕೃಷ್ಣ ಶೆಟ್ಟಿ ಕಡಬ ಭಾಗವಹಿಸಲಿದ್ದಾರೆ.

ಹಾಗೂ ಗಣ್ಯ ಉಪಸ್ಥಿತಿಯಾಗಿ ಕೃಷ್ಣ ಕಾಮತ್ ಮಾಲಕರು, ಶ್ರೀ ಹರಿ ಕಾಂಪ್ಲೆಕ್ಸ್ ಸುಳ್ಯ, ಅಕ್ಷಯ್ ಕೆ.ಸಿ. ಪ್ರಧಾನ ಕಾರ್ಯದರ್ಶಿ ಎ.ಒ.ಎಲ್.ಇ. (ರಿ) ಸುಳ್ಯ , ಅಶೋಕ್ ಪ್ರಭು, ಉದ್ಯಮಿಗಳು ಸುಳ್ಯ, ಪ್ರಕಾಶ್ ತೋರಣಗಂಡಿ ಅಧ್ಯಕ್ಷರು, ಶ್ರೀ ಮಹಾಗಣಪತಿ ಭಜನಾ ಮಂದಿರ ಮುಳ್ಯ ಅಟ್ಲೂರು ಉಪಸ್ಥಿತರಿರುವರು.

ಬ್ಯಾಂಕೇತರ ಹಣಕಾಸು ವಲಯದಡಿ ಒಂದು ಹೊಸ ಮೈಲುಗಲ್ಲು ಇಡಲು ಮುಂದಾಗಿರುವ ಈ ಸಂಸ್ಥೆಯು ಜಿಲ್ಲೆಯ ವಿವಿಧ ಕಡೆಗಳಲ್ಲಿ ಡಿ.ಕೆ. ಲೋನ್ ಅಡ್ವೈಸರಿಸರಿ & ಫೈನಾನ್ಸಿಯಲ್ ಸರ್ವಿಸಸ್, ದಕ್ಷಿಣ ಕನ್ನಡ ಮ್ಯೂಚುಯಲ್ ಬೆನಿಫಿಟ್ ನಿಧಿ ಲಿಮಿಟೆಡ್, ಮಂಜರನ್ ಚಿಟ್ಸ್ ಪ್ರೈವೇಟ್ ಲಿಮಿಟೆಡ್ , ಡಿ.ಕೆ.ಇನ್ವೆಸ್ಮೆಂಟ್ & ಹೋಲ್ಡಿಂಗ್ಸ್ , ಡಿ.ಕೆ.ಫಿನ್ಸಾರ್ವ್ ಫೈನಾನ್ಸ್ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದೆ.