ದಿನೇಶ್ ಶೆಟ್ಟಿ ದರ್ಖಾಸ್ತು ಇವರ ನೇತೃತ್ವದ ಗ್ಲೋಬಲ್ ಮೀಡಿಯಾ ವತಿಯಿಂದ ಪ್ರತಿವರ್ಷದಂತೆ ಈ ವರ್ಷದ ತುಳು ಕ್ಯಾಲೆಂಡರ್ ಸಿದ್ಧಗೊಳಿಸಿದ್ದು, ಅದರ ಬಿಡುಗಡೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವಿರೇಂದ್ರ ಹೆಗ್ಗಡೆಯವರು ನೇರವೇರಿಸಿದರು.
ಈ ಸಂದರ್ಭ ಎಸ್.ಡಿ.ಎಂ. ಸೊಸೈಟಿಯ ಕಾರ್ಯದರ್ಶಿ ಜೀವಂಧರ್ ಕುಮಾರ್, ಉದ್ಯಮಿ ಸತೀಶ್ ಡಿ.ಶೆಟ್ಟಿ, ಗ್ಲೋಬಲ್ ಮೀಡಿಯಾದ ಸತೀಶ್ ರಾವ್ ಮತ್ತು ದಿನೇಶ್ ಶೆಟ್ಟಿ ಉಪಸ್ಥಿತರಿದ್ದರು.
ತುಳು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯ ಸಂಪೂರ್ಣ ವಿವರಗಳುಳ್ಳ ಈ ತುಳುನಾಡು ಪಂಚಾಗ ಕ್ಯಾಲೆಂಡರ್‌ನಲ್ಲಿ ವರ್ಷಕ್ಕೆ ಒಂದು ವಿಶೇಷತೆಯನ್ನು ಅಳವಡಿಸಿಕೊಂಡು ಪ್ರಕಟಿಸಲಾಗುತ್ತಿದೆ. ಈ ಬಾರಿಯ ೨೦೨೫ನೇ ವರ್ಷದ ಕ್ಯಾಲೆಂಡರ್‌ನಲ್ಲಿ ಈ ಮೂರು ಜಿಲ್ಲೆಗಳ ಪ್ರಸಿದ್ಧ ಗಣಪತಿ ಕ್ಷೇತ್ರಗಳ ಅಪರೂಪದ ಭಾವಚಿತ್ರಗಳನ್ನು ಹಾಕಿ ಕ್ಯಾಲೆಂಡರ್ ಮುದ್ರಿಸಲಾಗಿದೆ. ಪಂಚಾಂಗದಲ್ಲಿರುವಂತೆ ಸಂವತ್ಸರ, ಋತು, ಮಾಸ, ನಕ್ಷತ್ರಗಳ ವಿವರಗಳುಳ್ಳ ಇದರಲ್ಲಿ ತುಳು ತಿಂಗಳ ಮತ್ತು ದಿನಗಳ ವಿವರಗಳಿವೆ.