ಪ್ರತಿಷ್ಠಿತ ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘ ಬೆಂಗಳೂರು ಇಲ್ಲಿನ ಕುವೆಂಪು
ಕಲಾ ಕ್ಷೇತ್ರದ ಸಭಾಭವನದಲ್ಲಿ ಡಿ. 30ರಂದು ರಾಷ್ಟ್ರಕವಿ
ಕುವೆಂಪುರವರ ಜನ್ಮ ದಿನೋತ್ಸವ, ಕನ್ನಡ ರಾಜ್ಯೋತ್ಸವ ಮತ್ತು ಕಲಾ
ಸಂಘದ 29ನೇ ವಾರ್ಷಿಕೋತ್ಸವ, ಸನ್ಮಾನ ಸಮಾರಂಭ
ನೆರವೇರಿತು. ಕಾರ್ಯಕ್ರಮವನ್ನು ಶ್ರೀಶ್ರೀಶ್ರೀ ನಂಚಾವದೂತ
ಮಹಾಸ್ವಾಮೀಜಿ ಸ್ಪಟಿಕಾನಂದಪುರಿ, ಪಟ್ಟ ನಾಯಕನಹಳ್ಳಿ ಹಾಗೂ ಶ್ರೀಶ್ರೀಶ್ರೀ
ನಿಶ್ಚಲಾನಂದನಾಥ ಮಹಾಸ್ವಾಮೀಜಿಯವರು ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠ
ಕೆಂಗೇರಿಯವರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಒಕ್ಕಲಿಗರ
ಸಂಘದ ಅಧ್ಯಕ್ಷ ಕೆಂಚಪ್ಪ ಗೌಡ ವಹಿಸಿದ್ದರು.
ಬೆಳಿಗ್ಗೆ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ. ರೇಣುಕಾ ಪ್ರಸಾದ್ ಕೆ.ವಿ ಧ್ವಜಾರೋಹಣಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತಾನಾಡಿ
ಕುವೆಂಪುರವರು ನಮ್ಮ ಒಕ್ಕಲಿಗ ಸಮುದಾಯದಲ್ಲಿ ಹುಟ್ಟಿ ಹಳ್ಳಿಯ ಗ್ರಾಮೀಣ ಸೊಗಡನ್ನು
ಸಾಹಿತ್ಯದ ಮೂಲಕ ಈ ರಾಷ್ಟ್ರಕ್ಕೆ ಬಿತ್ತಿದ ನಮ್ಮೆಲ್ಲರ ಹೆಮ್ಮೆಯ ಕವಿ. ಅವರ ಬದುಕಿನ ಆದರ್ಶಗಳನ್ನು, ಅವರ ಸಮಯ ಪ್ರಜ್ಞೆಯನ್ನು ನಾವೆಲ್ಲರೂ
ಪಾಲಿಸಬೇಕಾಗಿದೆ. ಇತಿಹಾಸವನ್ನು ಅವಲೋಕಿಸಿದಾಗ ಪ್ರತಿಷ್ಠಿತ ಒಕ್ಕಲಿಗರ ಸಂಘದ
ತಾಂತ್ರಿಕ ಮಹಾವಿದ್ಯಾಲಯ ಕಟ್ಟಡದ ಶಿಲಾನ್ಯಾಸವನ್ನು ಕುವೆಂಪುರವರು ನೆರವೇರಿಸಿದ ಬಗ್ಗೆ
ದಾಖಲೆ ಇದೆ. ಹಾಗಾಗಿ ಈ ನಮ್ಮ ರಾಜ್ಯದ ಬೆಳವಣಿಗೆಯಲ್ಲಿ ಮತ್ತು ನಮ್ಮ
ಸಮುದಾಯದ ಬೆಳವಣಿಗೆಯಲ್ಲಿ ಕುವೆಂಪುರವರ ಪಾತ್ರ ಅತೀ ಮಹತ್ವವಾದುದು
ಎಂದು ಹೇಳಿ ಶುಭ
ಹಾರೈಸಿದರು.