ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಆಶ್ರಯದಲ್ಲಿ ಕ್ರಿಕೆಟ್, ಥ್ರೋ ಬಾಲ್ ಪಂದ್ಯಾಟ- ಮೆಡಿಕಲ್ ಪ್ರೇಮಿಯರ್ ಲೀಗ್

0

ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಆಶ್ರಯದಲ್ಲಿ ಎರಡು ದಿನಗಳ ಮೆಡಿಕಲ್ ಪ್ರೀಮಿಯರ್ ಲೀಗ್ ಪುರುಷರ ಕ್ರಿಕೆಟ್ ಹಾಗೂ ಮಹಿಳೆಯರ ಥ್ರೋ ಬಾಲ್ ಕ್ರೀಡಾಕೂಟದ ಉದ್ಘಾಟೆ ಜ. 03 ರಂದು ಎನ್. ಎಮ್. ಸಿ ಕ್ರೀಡಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಎ.ಒ.ಎಲ್.ಇ ಅಧ್ಯಕ್ಷ ಡಾ. ಕೆ.ವಿ ಚಿದಾನಂದ ಉದ್ಘಾಟಿಸಿ ಶುಭ ಹಾರೈಸಿದರು. ಎ.ಒ.ಎಲ್.ಇ ಉಪಾಧ್ಯಕ್ಷೆ ಸ್ರೀಮತಿ ಶೋಭಾ ಚಿದಾನಂದ, ಕಾಲೇಜಿನ ಡೀನ್ ಡಾ. ನೀಲಾಂಬಿಕೈ ನಟರಾಜನ್, ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ.ವಿ, ಒ.ಬಿ.ಜಿ ವಿಭಾಗ ಮುಖ್ಯಸ್ಥರಾದ ಡಾ. ಗೀತಾ ದೊಪ್ಪ, ಕೆವಿಜಿ ಕಾಲೇಜ್ ಆಫ್ ನರ್ಸಿಂಗ್ ನ ಪ್ರಾಂಶುಪಾಲೆ ಚಂದ್ರಾವತಿ, ಕೆವಿಜಿ ಕಾಲೇಜ್ ಆಫ್ ನರ್ಸಿಂಗ್ ಸೈನ್ಸಸ್ ನ ಪ್ರಾಂಶುಪಾಲೆ ಪ್ರೇಮ ಬಿ.ಎಮ್, ಫಿಸಿಯೋತೆರಪಿ ವಿಭಾಗದ ಪ್ರಾಂಶುಪಾಲರಾದ ಸಾಯಿರಾಮ್ ಮತ್ತು ತಂಡಗಳ ಮುಖ್ಯಸ್ಥರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಹಿರಿಯ ಸಿಬ್ಬಂದಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಡಾ. ಕೆ.ವಿ ಚಿದಾನಂದ ಹಾಗೂ ಡಾ. ಲೀಲಾಧರ್ ಡಿ ವಿ ಬ್ಯಾಟಿಂಗ್ ಮಾಡುವುದರ ಮೂಲಕ ಕ್ರೀಡಾಕೂಟವನ್ನು ಉದ್ಘಾಟಿಸಿದರು.


ನರ್ಸಿಂಗ್ ಸೂಪರ್ ವೈಸರ್ ಪ್ರೇಮ ಪ್ರಾರ್ಥಿಸಿದರು. ಡಾ ಗೀತಾ ದೊಪ್ಪ ಸ್ವಾಗತಿಸಿದರು. ಶಶಿಕಾಂತ್ ಕಾರ್ಯಕ್ರಮ ನಿರೂಪಿಸಿದರು. ಒಟ್ಟು 10 ಕ್ರಿಕೆಟ್ ತಂಡ ಹಾಗೂ 4 ಥ್ರೋ ಬಾಲ್ ತಂಡಗಳು ಭಾಗವಸಲಿದ್ದು, ಜ. 4ರಂದು ಮುಕ್ತಾಯಗೊಳ್ಳಲಿದೆ.