ಬಿಜೆಪಿ, ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಿಂದ ನಾಮ ಪತ್ರ ಸಲ್ಲಿಕೆ
ಪಂಬೆತ್ತಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭಗೊಂಡಿದ್ದು, ಜ. 3ರಂದು ಸಂಘದ ಕಚೇರಿಯಲ್ಲಿ ಬಿಜೆಪಿ, ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.
ಜೆಡಿಎಸ್ ನಾಯಕ ಸಂಘದ ಹಾಲಿ ಅಧ್ಯಕ್ಷ ಜಾಕೆ ಮಾಧವ ಗೌಡ, ಮಾಜಿ ಉಪಾಧ್ಯಕ್ಷ ಸಂತೋಷ್ ಜಾಕೆ, ಜಯರಾಮ ಬೆಳಗಜೆ, ದಿಲೀಪ್ ಬಾಬ್ಲುಬೆಟ್ಟು, ಸತ್ಯಶಂಕರ ಕಲ್ಚಾರ್, ದಿನೇಶ್ ಪಂಜದಬೈಲು ಸಾಮಾನ್ಯ ಸ್ಥಾನದಿಂದ ನಾಮ ಪತ್ರ ಸಲ್ಲಿಸಿದರೆ, ಹಿಂದುಳಿದ ವರ್ಗ ಎ ಕ್ಷೇತ್ರದಿಂದ ರೋಹಿತಾಶ್ವ, ಹಿಂದುಳಿದ ವರ್ಗ ಬಿ ಪದ್ಮನಾಭ ಪಿ, ಪರಿಶಿಷ್ಟ ಪಂಗಡ ಮೀಸಲು ಸ್ಥಾನದಿಂದ ಶ್ರೀಮತಿ ಪುಷ್ಪಾವತಿ ಅಣ್ಣಪ್ಪ ನಾಯ್ಕ, ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ಕರಿಯ ಮತ್ತು ಗುರುವ, ಮಹಿಳಾ ಮೀಸಲು ಸ್ಥಾನದಿಂದ ಶ್ರೀಮತಿ ಮೂಕಾಂಬಿಕಾ ಮತ್ತು ಶ್ರೀಮತಿ ರತಿದೇವಿ ಜಾಕೆ, ಸಾಲಗಾರರಲ್ಲದ ಕ್ಷೇತ್ರದಿಂದ ರಕ್ಷಿತ್ ಹೆಚ್ ನಾಮಪತ್ರ ಸಲ್ಲಿಸಿದ್ದಾರೆ.