ಕಂದ್ರಪ್ಪಾಡಿ ಶ್ರೀ ರಾಜ್ಯ ದೈವ ಮತ್ತು ಪುರುಷ ದೈವಸ್ಥಾನದ ನೂತನ ಪಲ್ಲಕ್ಕಿ ನಿರ್ಮಾಣಕ್ಕೆ ಮರ ಕಡಿಯುವ ಕಾರ್ಯಕ್ರಮ

0


ಕಂದ್ರಪ್ಪಾಡಿ ಶ್ರೀ ರಾಜ್ಯ ದೈವ ಮತ್ತು ಪುರುಷ ದೈವಸ್ಥಾನಕ್ಕೆ ಹರ್ಷಕುಮಾರ್ ಮುಂಡೋಡಿಯವರು ನೂತನ ಪಲ್ಲಕ್ಕಿಯನ್ನು ದೈವಸ್ಥಾನಕ್ಕೆ ಅರ್ಪಿಸಲಿದ್ದಾರೆ. ಆ ಪ್ರಯುಕ್ತ ಶಿಲ್ಪಿಗಳ ಮುಖಾಂತರ ಸುಮೂರ್ತದಲ್ಲಿ ಮರಕ್ಕೆ ಪೂಜೆ ಸಲ್ಲಿಸಿ ನಂತರ ಮರ ಕಡಿಯಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಕಾಳಿಕಾ ಪ್ರಸಾದ್ ಮುಂಡೋಡಿ, ಪ್ರೀತಂ ಮುಂಡೋಡಿ, ವೇಣು ಕುಮಾರ್ ಚಿತ್ತಡ್ಕ, ಹರ್ಷ ಕುಮಾರ್ ಮುಂಡೋಡಿ, ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.