ರಂಗಮನೆ ಸಾಂಸ್ಕ್ರತಿಕ ಕಲಾ ಕೇಂದ್ರ ಸುಳ್ಯ ಇದರ ಆಶ್ರಯದಲ್ಲಿ ಸಪ್ತಸ್ವರ ಸಂಗೀತ ಕಲಾ ಶಾಲೆ ಸುಳ್ಯ ಇದರ ಗುರುಗಳಾದ ವಿದುಷಿ ಶ್ಯಾಮಲಾ ಕೇಶವ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ತರಗತಿಯು ಉದ್ಘಾಟನೆಗೊಂಡಿತು. ದೀಪ ಬೆಳಗಿಸಿ ಉದ್ಘಾಟಿಸಿದ ಹಿರಿಯ ಗಾಯಕರಾದ ಕೆ.ಆರ್.ಗೋಪಾಲಕೃಷ್ಣ ಇವರು ಮಾತನಾಡಿ ” ಶಾಸ್ತ್ರೀಯ ಸಂಗೀತಕ್ಕೆ ಕಠಿಣ ಅಭ್ಯಾಸದ ಅವಶ್ಯಕತೆ ಇದೆ. ಗುರುಗಳಲ್ಲಿ ಭಕ್ತಿ , ಕಲಿಕೆಯಲ್ಲಿ ಶ್ರದ್ಧೆ ತಾಳ್ಮೆಯಿದ್ದು ಸಂಗೀತವನ್ನು ಒಲಿಸಿಕೊಳ್ಳಬೇಕು .ಮಂದ್ರ ಮತ್ತು ತಾರಾ ಸ್ಥಾಯಿಯನ್ನು ಸುಲಭದಲ್ಲಿ ತಲುಪುವವನು ಮಾತ್ರ ಉತ್ತಮ ಗಾಯಕನಾಗಬಲ್ಲ” ಎಂದರು.
ಮುಖ್ಯ ಅತಿಥಿಗಳಾಗಿದ್ದ ಕಲಾ ಪೋಷಕಿ, ಕಸ್ತೂರಿ ನರ್ಸರಿಯ ಶ್ರೀಮತಿ ಲತಾ ಮಧುಸೂಧನ್ ಮಾತನಾಡಿ
” ಕಲಿಕೆಗೆ ಸೂಕ್ತವಾದ ಜಾಗ ಈ ರಂಗಮನೆ. ಹಲವು ಕಲೆಗಳಿಗೆ ಆಶ್ರಯ ನೀಡುತ್ತಿರುವ ರಂಗಮನೆಯಲ್ಲಿ ಇದೀಗ ಶಾಸ್ತ್ರೀಯ ಸಂಗೀತದ ತರಗತಿ ಆರಂಭವಾಗಿರುವುದು ಪ್ರಶಂಸನೀಯ” ಎಂದರು.
” ಬದುಕಿನ ನೆಮ್ಮದಿಗೆ ಸಂಗೀತ ಪೂರಕ “
—– ಡಾ| ಜೀವನ್ ರಾಂ ಸುಳ್ಯ
‘ಸೃಷ್ಟಿಯ ಪ್ರತಿ ಜೀವಿಗಳಲ್ಲೂ ಸಂಗೀತವಿದೆ.
ಮಾತು ನಡಿಗೆಗಳಲ್ಲಿ ತಾಳ ಲಯ ಭಾವ ಇದೆ.
ಬಾಲ್ಯದಲ್ಲೇ ಮಕ್ಕಳಿಗೆ ಸಂಗೀತದ ಒಲವು ಮೂಡಿಸುವುದರಿಂದ ಅವರು ಸಂಸ್ಕಾರಯುತರಾಗುತ್ತಾರೆ.
ಸಂಗೀತ ಕೇಳುವುದರಿಂದ ಮನಸ್ಸು ಅರಳುತ್ತದೆ. ನೆಮ್ಮದಿಯ ಬದುಕಿಗೆ ಸಂಗೀತ ಬಹಳ ಪೂರಕ.
ರಂಗಮನೆಯಲ್ಲಿ ಯೋಗ್ಯ ಗುರುಗಳಿಂದ ಸಂಗೀತದ ಕಲಿಕೆ ಆರಂಭಿಸಿರುವುದು ನನಗೆ ಬಹಳ ಸಂತಸ ತಂದಿದೆ ” ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ| ಜೀವನ್ ರಾಂ ಸುಳ್ಯ ಹೇಳಿದರು.
ಸಪ್ತಸ್ವರ ಸಂಗೀತ ಕಲಾ ಶಾಲೆಯ ಗುರುಗಳಾದ ಶ್ರೀಮತಿ ಶ್ಯಾಮಲಾ ಕೇಶವ್ ಪ್ರಾಸ್ತಾವಿಕ ನುಡಿಗಳೊಂದಿಗೆ ಎಲ್ಲರನ್ನೂ ಸ್ವಾಗತಿಸಿದರು.
ಮಾ| ವಿಯೂಷ್ ಉಬರಡ್ಕ ಆರಂಭದಲ್ಲಿ ಪ್ರಾರ್ಥನೆ ಹಾಡಿದರು.
ಸುಳ್ಯ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಮಮತ ಕೆ. ಕಾರ್ಯಕ್ರಮ ನಿರೂಪಿಸಿದರು.
ನಿವೃತ್ತ ಮುಖ್ಯೋಪಧ್ಯಾಯ ಶ್ರೀ ನಾರಾಯಣ ಭಟ್, ರಂಗಮನೆಯ ಸದಸ್ಯ ರವೀಶ್ ಪಡ್ಡಂಬೈಲು ಉಪಸ್ಥಿತರಿದ್ದರು.