ಬೆಳಕು ಸಾಹಿತ್ಯ, ಶೈಕ್ಷಣಿಕ, ಸಾಂಸ್ಕೃತಿಕ ಟ್ರಸ್ಟ್ ರಾಯಚೂರು ಇವರು ರಾಯಚೂರಿನಲ್ಲಿ ನಡೆಸಿದ ಕನ್ನಡ ಕಲರವ ಸಮ್ಮೇಳನದಲ್ಲಿ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಕವಿಯತ್ರಿ ಸೌಮ್ಯ ಎರ್ಮೆಟ್ಟಿ ಇವರನ್ನು ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಗುರುತಿಸಿ ರಾಷ್ಟ್ರಮಟ್ಟದ ಕವಿರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.
ವಿದ್ಯಾರ್ಥಿ ಸಮಯದಲ್ಲಿಯೇ ನೃತ್ಯ, ಯಕ್ಷಗಾನ, ಕ್ರೀಡೆ, ಭಜನೆ, ಕರಾಟೆಗಳಲ್ಲಿ ತೊಡಗಿಸಿಕೊಂಡಿದ್ದ ಇವರು ಕವನ, ಲೇಖನಗಳನ್ನು ಬರೆಯುತ್ತಿದ್ದರು. ಇವರ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಸೌಮ್ಯ ರವರು ನೆಲ್ಲೂರು ಕೆಮ್ರಾಜೆ ಗ್ರಾಮದ ಎರ್ಮೆಟ್ಟಿ ಶೇಖರ ಮತ್ತು ಸುಂದರಿ ದಂಪತಿಗಳ ಪುತ್ರಿ. ಪ್ರಸ್ತುತ ನೆಲ್ಯಾಡಿ ಯಲ್ಲಿ ಉದ್ಯೋಗಿಯಾಗಿದ್ದಾರೆ.